
ಬಸವಕಲ್ಯಾಣ: ನಗರದ ತ್ರಿಪುರಾಂತ ಕೆರೆ ದಂಡೆಯಲ್ಲಿ ಶುಕ್ರವಾರ ಮಡಿವಾಳ ಮಾಚಿದೇವರ ಜಾತ್ರೆ ಅಂಗವಾಗಿ ಅಪಾರ ಭಕ್ತರು ಕೆಂಡ ತುಳಿದರು.
ಪಲ್ಲಕ್ಕಿ ಮೆರವಣಿಗೆಯೊಂದಿಗೆ ಕೆರೆ ದಂಡೆಯಲ್ಲಿನ ಅಗ್ನಿಕುಂಡಕ್ಕೆ ಬಂದಾಗ ಭಕ್ತರು ತೆಂಗು, ಪುಷ್ಪಮಾಲೆ ಅರ್ಪಿಸಿ ದರ್ಶನ ಪಡೆದರು. ಅದಾದಮೇಲೆ ಅಗ್ನಿಕುಂಡಕ್ಕೆ ಪ್ರದಕ್ಷಿಣೆ ಹಾಕಲಾಯಿತು. ನಂತರ ಭಕ್ತರು ಕೆಂಡ ತುಳಿದರು. ಮೆರವಣಿಗೆಯಲ್ಲಿ ಛತ್ರಿ, ಚಾಮರಗಳೊಂದಿಗೆ ಧ್ವಜ, ಪತಾಕೆಗಳನ್ನೂ ಹಿಡಿಯಲಾಗಿತ್ತು. ಡೊಳ್ಳು ಕುಣಿತ, ಹಲಿಗೆ, ಬ್ಯಾಂಡ್ ಬಾಜಾ ಹಾಗೂ ಇತರೆ ವಾದ್ಯ ಮೇಳದವರು, ಭಜನಾ ತಂಡದವರು ಪಾಲ್ಗೊಂಡಿದ್ದರು.
ಸಂಜೆಯವರೆಗೆ ಇಲ್ಲಿ ಜಾತ್ರೆಯ ವಾತಾವರಣವಿತ್ತು. ಬೆಂಡು, ಬತ್ತಾಸು ಹಾಗೂ ಮಕ್ಕಳ ಆಟಿಕೆಗಳು, ವಿವಿಧ ತಿನಿಸುಗಳ ಮಾರಾಟ ನಡೆಯಿತು. ಸಂಕ್ರಾಂತಿ ಹಬ್ಬದ ಅಂಗವಾಗಿ ತ್ರಿಪುರಾಂತದಲ್ಲಿ ವಾರದವರೆಗೆ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆದವು. ನಾಟಕ ಪ್ರದರ್ಶನವೂ ಇತ್ತು. ಮಠಾಧೀಶರು ರಾಜಕೀಯ ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.