ADVERTISEMENT

ಬೀದರ್: ‘ಶಿಕ್ಷಣದಿಂದ ಅಂಬೇಡ್ಕರ್‌ ಕನಸು ನನಸು’

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:13 IST
Last Updated 22 ಮೇ 2025, 15:13 IST
ಬೀದರ್ ನಗರದಲ್ಲಿ ನಡೆದ ಡಾ.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಕ್ಕೆ ರಮಾತಾಯಿ  ಚಾಲನೆ ನೀಡಿದರು
ಬೀದರ್ ನಗರದಲ್ಲಿ ನಡೆದ ಡಾ.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಕ್ಕೆ ರಮಾತಾಯಿ  ಚಾಲನೆ ನೀಡಿದರು   

ಬೀದರ್: ‘ಸರ್ಕಾರಗಳು ಎಲ್ಲರಿಗೂ ಸಮ ಶಿಕ್ಷಣ ನೀಡಿದಾಗ. ಶೋಷಿತರು, ಮಧ್ಯಮ ವರ್ಗದವರು ಶಿಕ್ಷಿತರಾದಾಗ ಮಾತ್ರ ಡಾ. ಅಂಬೇಡ್ಕರ್ ಅವರ ಕನಸು ನನಸಾದಂತೆ’ ಎಂದು ಅಂಬೇಡ್ಕರ್ ಅವರ ಮೊಮ್ಮಗಳು ರಮಾತಾಯಿ ತೇಲತುಂಬಡೆ ಹೇಳಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಬುಧವಾರ ಸಮಾನ ಮನಸ್ಕರ ನಾಗರಿಕ ವೇದಿಕೆಯಿಂದ ಅಂಬೇಡ್ಕರ್ ಜಯಂತಿ ಜಯಂತ್ಯುತ್ಸವ ಹಾಗೂ ಡಾ.ಅಂಬೇಡ್ಕರ್ ಪ್ರಶಸ್ತಿ ಪಡೆದ ಎಂಎಲ್‌ಸಿ ಕೆ.ಪುಂಡಲಿಕರಾವ ಅವರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಅಂಬೇಡ್ಕರ್ ಅವರು ಜನರ ಹಕ್ಕಿಗಾಗಿ ತಮ್ಮ ಇಡೀ ಜೀವನ ಮುಡುಪಾಗಿಟ್ಟಿದ್ದರು. ದಲಿತರು ಕೆವಲ ಏ.14 ರಂದು ಅಂಬೇಡ್ಕರ್ ಜಯಂತಿ ಮಾಡಿ ಸಂಭ್ರಮಾಚರಣೆ ಮಾಡದೆ ಅವರ ಆದರ್ಶಗಳ ಮೇಲೆ ನಡೆದರೆ ಮಾತ್ರ ಸಮಾಜದ ಉದ್ಧಾರ ಸಾಧ್ಯ. ಮನುವಾದಿಗಳು ಸಂವಿಧಾನ ಬದಲಿಸುವ ಪ್ರಯತ್ನ ಮಾಡುತಿದ್ದಾರೆ ಆದ್ದರಿಂದ ಅಂಬೇಡ್ಕರ್ ಅನುಯಾಯಿಗಳು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಅಧಿಕಾರ ಪಡೆಯಿರಿ’ ಎಂದು ಕರೆ ನೀಡಿದರು.

ADVERTISEMENT

ಕೇರಳದ ಕಾಸರಗೋಡಿನ ದತ್ತಿ ನಿಧಿ ಪ್ರಶಸ್ತಿ ಪಡೆದ ಪತ್ರಕರ್ತ ಮೌಲಾನಾಸಾಬ್ (ಹಾಜಿ ಪಾಶಾ), ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪಡೆದ ಮಾಜಿ ಶಾಸಕ ಕೆ.ಪುಂಡಲಿಕ ರಾವ್ ಅವರನ್ನು ಹಾಗೂ ರಮಾತಾಯಿ ಅಂಬೇಡ್ಕರ್ ಅವರನ್ನು  ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬಿಜಾಪುರ ಸಿಂಧಗಿಯ ವಿರತೀಶಾನಂದ ಸ್ವಾಮೀಜಿ, ಸಿದ್ದರಾಮ ಶರಣರು ಬೆಲ್ದಾಳೆ, ಭಂತೆ ಜ್ಞಾನಸಾಗರ, ಮಾಜಿ ಸಚಿವ ರಾಜಶೇಖರ ಪಾಟೀಲ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಧನರಾಜ ತಾಳಂಪಳ್ಳಿ, ಪಂಡಿತರಾವ ಚಿದ್ರಿ, ಮಾರುತಿ ಬೌದ್ಧೆ, ಸಂಜಯ ಜಾಗಿರದಾರ, ಮುರಳಿಧರರಾವ ಏಕಲಾರಕರ್, ವಿದ್ಯಾಸಾಗರ್ ಶಿಂಧೆ, ಅಬ್ದುಲ್ ಮನ್ನಾನ ಸೇಠ, ದತ್ತಾತ್ರಿ ಮೂಲಗೆ, ನಗರ ಸಭೆ ಸದಸ್ಯರಾದ ಪ್ರಶಾಂತ ದೊಡ್ಡಿ, ಮೋಹನ ಕಾಳೆಕರ, ಅಂಬಾದಾಸ ಗಾಯಕವಾಡ, ರಘುನಾಥ ಜಾಧವ, ಅಜಮತ ಪಟೇಲ್, ಎಲ್‌.ಜಿ.ಗುಪ್ತ, ಕಾಶಿನಾಥ ಚಲವಾ, ಸಿದ್ರಾಮಯ್ಯ ಸ್ವಾಮಿ, ಮಾಳಪ್ಪ ಅಡಸಾರೆ, ದೇವೇಂದ್ರ ಸೋನಿ, ವೈಜಿನಾಥ ಏನಗುಂದಿ, ವಿಷ್ಣುವರ್ಧನ ವಾಲ್ದೋಡ್ಡಿ, ಭರತ ಕಾಂಬಳೆ ಮಾರುತಿ ಶಾಖಾ, ಬಶಿರೋದ್ದಿನ್ ಹಾಲಹಿಪ್ಪರ್ಗಾ, ಗಂಗಮ್ಮ ಫುಲೆ, ರಾಜಪ್ಪ ಗೂನಳ್ಳಿ, ಪ್ರಶಾಂತಿ ಭಾವಿಕಟ್ಟಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.