ADVERTISEMENT

ಸೊಳ್ಳೆ ಔಷಧ ಕುಡಿದು ಸಾವು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 11:10 IST
Last Updated 17 ಡಿಸೆಂಬರ್ 2018, 11:10 IST

ಬೀದರ್: ದಮ್ಮು ನಿವಾರಕ ಔಷಧ ಎಂದು ಭಾವಿಸಿ ಸೊಳ್ಳೆ ಓಡಿಸುವ ಔಷಧ ಕುಡಿದು ಇಲ್ಲಿಯ ಮೈಲೂರಿನ ಗಾಂಧಿನಗರದ ಜಲಾಲೊದ್ದಿನ್ ಶನಿವಾರ ಮೃತಪಟ್ಟಿದ್ದಾರೆ.

ಜಲಾಲೊದ್ದಿನ್ ಅವರು 9 ವರ್ಷಗಳಿಂದ ಧಮ್ಮಿನಿಂದ ಬಳಲುತ್ತಿದ್ದರು. ಬೆಳಿಗ್ಗೆ ತಂಪು ವಾತಾವರಣ ಇದ್ದ ಕಾರಣ ಅವರಿಗೆ ದಮ್ಮು ಜಾಸ್ತಿ ಆಗಿತ್ತು. ದಮ್ಮು ಔಷಧ ಇದ್ದ ಸ್ಥಳದಲ್ಲಿನ ಸೊಳ್ಳೆ ಔಷಧ (ಆಲೌಟ್)ವನ್ನೇ ದಮ್ಮು ಔಷಧ ಎಂದು ತಿಳಿದು ಸೇವಿಸಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೃತರ ಪುತ್ರ ಖಲೀಲ್ ಗಾಂಧಿಗಂಜ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT