ADVERTISEMENT

ಮಾಂಜಾ ದಾರ ಬಳಸಬೇಡಿ: ಡಿವೈಎಸ್ಪಿ ಮಡೋಳಪ್ಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:27 IST
Last Updated 17 ಜನವರಿ 2026, 6:27 IST
ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ರಾಷ್ಟೀಯ ಹೆದ್ದಾರಿಯಲ್ಲಿ ಪತ್ತೆಯಾಗಿದ್ದ ಮಾಂಜಾ ದಾರವನ್ನು ಡಿವೈಎಸ್ಪಿ ಮಡೋಳಪ್ಪ ಪರಿಶೀಲಿಸಿದರು  
ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ರಾಷ್ಟೀಯ ಹೆದ್ದಾರಿಯಲ್ಲಿ ಪತ್ತೆಯಾಗಿದ್ದ ಮಾಂಜಾ ದಾರವನ್ನು ಡಿವೈಎಸ್ಪಿ ಮಡೋಳಪ್ಪ ಪರಿಶೀಲಿಸಿದರು     

ಚಿಟಗುಪ್ಪ (ಹುಮನಾಬಾದ್‌): ‘ಮಾಂಜಾ ದಾರವನ್ನು ( ಗಾಳಿಪಟ ಹಾರಿಸುವ ದಾರದ ಒಂದು ವಿಧ) ಸಂಪೂರ್ಣ ನಿಷೇಧ ಮಾಡಲಾಗಿದ್ದು, ಯಾರೂ ಇದನ್ನು ಬಳಸಬಾರದು’ ಎಂದು ಡಿವೈಎಸ್ಪಿ ಮಡೋಳಪ್ಪ ತಿಳಿಸಿದರು.

ತಾಲ್ಲೂಕಿನ ಮಂಗಲಗಿ ರಾಷ್ಟೀಯ ಹೆದ್ದಾರಿಯಲ್ಲಿ ಸಂಗ್ರಗೊಂಡಿದ ಮಾಂಜಾ ದಾರ ತೆರವುಗೊಳಿಸಿ ಅವರು ಮಾತನಾಡಿದರು. ಈಗಾಗಲೇ ಹುಮನಾಬಾದ್ ಉಪವಿಭಾಗದ ಬಸವಕಲ್ಯಾಣ, ಹುಮನಾಬಾದ್, ಚಿಟಗುಪ್ಪ, ಹುಲಸೂರ ತಾಲ್ಲೂಕಿನಾದ್ಯಂತ ಮಾಂಜಾ ದಾರ ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮಾಂಜಾ ದಾರ ಜನರಿಗೆ ಮತ್ತು ಪ್ರಾಣಿಗಳಿಗೆ ಮಾರಕವಾಗಿದ್ದು ಯಾರೂ ಮಾರಾಟ ಮಾಡಬಾರದು. ತಾಳಮಡಗಿ ಮತ್ತು ಮಂಗಲಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪತ್ತೆಯಾದ ದಾರವನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಮಹೇಂದ್ರ ಕುಮಾರ್, ಸೋಮನಾಥ ಶಾಸ್ತ್ರಿ, ರೇವಣಸಿದ್ದಪ್ಪ ವಾಲಿ ಸೇರಿದಂತೆ ಇತರರು ಹಾಜರಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.