ADVERTISEMENT

ಕಮಲನಗರ: ಮಾಂಜ್ರಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ

ರೈತರ ಹೊಲಗಳಿಗೆ ನುಗ್ಗಿದ ನೀರು. ಅಪಾರ ಪ್ರಮಾಣದ ಬೆಳೆ ನೀರುಪಾಲು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 3:57 IST
Last Updated 25 ಸೆಪ್ಟೆಂಬರ್ 2025, 3:57 IST
ಕಮಲನಗರ ತಾಲ್ಲೂಕಿನ ಸಂಗಮ ಕ್ರಾಸ್ ಬಳಿಯ ಮಾಂಜ್ರಾ ನದಿ ತುಂಬಿ ಹರಿಯುತ್ತಿರುವುದು 
ಕಮಲನಗರ ತಾಲ್ಲೂಕಿನ ಸಂಗಮ ಕ್ರಾಸ್ ಬಳಿಯ ಮಾಂಜ್ರಾ ನದಿ ತುಂಬಿ ಹರಿಯುತ್ತಿರುವುದು    

ಕಮಲನಗರ: ತಾಲ್ಲೂಕಿನ ಸಂಗಮ ಕ್ರಾಸ್ ಬಳಿಯ ಮಾಂಜ್ರಾ ನದಿಗೆ ಮತ್ತೆ ಮಹಾರಾಷ್ಟ್ರದ ಧನ್ನೇಗಾಂವ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಬುಧವಾರ ಮತ್ತೆ ಪ್ರವಾಹ ಮಟ್ಟ ಹೆಚ್ಚಾಗಿದೆ.

ಮಾಂಜ್ರಾ ನದಿ ಅಕ್ಕ-ಪಕ್ಕದ ಗ್ರಾಮಗಳಾದ ಹೊರಂಡಿ, ಸೋನಾಳ, ಹುಲಸೂರ, ಕಾಳಗಾಪೂರ, ಖೇಡ, ಸಂಗಮ, ಹಾಲಹಳ್ಳಿ, ನಿಡೋದಾ, ಸಾವಳಿ ಹಾಗೂ ಇನ್ನಿತರ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಗಳಾದ ಸೋಯಾ, ತೊಗರಿ, ಇನ್ನಿತರ ಬೆಳೆಗಳು ನೀರು ಪಾಲಾಗಿವೆ.

ಸಂಗಮ-ಠಾಣಾಕುಶನೂರ ಮಧ್ಯದ ಬಳತ(ಕೆ) ಗ್ರಾಮದ ಸಮೀಪದ ಸೇತುವೆ ಹಾಗೂ ಸಂಗಮ-ಖೇಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ಮುಳುಗಡೆಯಾಗಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. 

ADVERTISEMENT
ಕೂಡಲೇ ಸರ್ಕಾರ ಅತೀವೃಷ್ಟಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು. ಅಲ್ಲದೇ ರೈತರಿಗೆ ಬೆಳೆವಿಮೆ ಪರಿಹಾರ ನೀಡಬೇಕು
-ನಾಗರಾಜ ಬಿರಾದಾರ, ಪಿಕೆಪಿಎಸ್ ಸದಸ್ಯ ನಿಡೋದಾ
ಸಂಗಮ-ಖೇಡ ಮಧ್ಯದ ಸೇತುವೆ ಮುಳುಗಡೆಯಾಗಿರುವುದು 
ಕಮಲನಗರ ತಾಲ್ಲೂಕಿನ ನಿಡೋದಾ ಗ್ರಾಮದ ರೈತರ ಹೊಲಗಳಿಗೆ ನೀರು ನುಗ್ಗಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.