ADVERTISEMENT

ಕಾಶೆಂಪುರ: ಸಂಭ್ರಮದ ಮರಿಗೆಮ್ಮ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 2:36 IST
Last Updated 17 ಜುಲೈ 2025, 2:36 IST
ಬೀದರ್ ತಾಲ್ಲೂಕಿನ ಕಾಶೆಂಪುರ (ಪಿ) ಗ್ರಾಮದಲ್ಲಿ ನಡೆದ ಮರಿಗೆಮ್ಮ ದೇವಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು
ಬೀದರ್ ತಾಲ್ಲೂಕಿನ ಕಾಶೆಂಪುರ (ಪಿ) ಗ್ರಾಮದಲ್ಲಿ ನಡೆದ ಮರಿಗೆಮ್ಮ ದೇವಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು   

ಕಾಶೆಂಪುರ(ಪಿ) (ಜನವಾಡ): ಬೀದರ್ ತಾಲ್ಲೂಕಿನ ಕಾಶೆಂಪುರ (ಪಿ) ಗ್ರಾಮದಲ್ಲಿ ಮರಿಗೆಮ್ಮ ದೇವಿ ಜಾತ್ರಾ ಮಹೋತ್ಸವ  ಮಂಗಳವಾರ ಸಂಭ್ರಮದಿಂದ ನಡೆಯಿತು.

ಗ್ರಾಮಸ್ಥರು ಬಡಿಗತನ ಕಾಯಕದಲ್ಲಿ ತೊಡಗಿಸಿಕೊಂಡವರಿಗೆ ಕಟ್ಟಿಗೆ ತುಂಡುಗಳನ್ನು ನೀಡಿದರು. ಅವರು ದೇವಿಯ ಹೊಸ ಮೂರ್ತಿಗಳನ್ನು ತಯಾರಿಸಿದರು. ಬಳಿಕ ಮೆರವಣಿಗೆಯಲ್ಲಿ ಅವುಗಳನ್ನು ಮರಿಗೆಮ್ಮ ಮಂದಿರಕ್ಕೆ ತಂದು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.

ADVERTISEMENT

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಬಂಡೆಪ್ಪ ಕಾಶೆಂಪುರ, ಪ್ರಮುಖರಾದ ಶಾಂತಲಿಂಗ ಸಾವಳಗಿ, ರಾಜಕುಮಾರ ಪೊಲೀಸ್ ಪಾಟೀಲ, ಬಾಬು ಕಾಶೆಂಪುರ, ಸಿ.ಎಂ.ನಾಗರಾಜ, ಎಂ.ಮುರಳೀಧರ, ಉಜ್ವಲ್ ಕಾಶೆಂಪುರ, ಅನಿಲ್ ಲಚ್ಚನೋರ, ಬಜರಂಗ ತಮಗೊಂಡ ಹಾಗೂ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.