ADVERTISEMENT

ವೈದ್ಯ ವಿದ್ಯಾರ್ಥಿ ಅಮರ್ಮೃತ ದೇಹ ಸ್ವಗ್ರಾಮಕ್ಕೆ ಇಂದು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 2:02 IST
Last Updated 8 ಸೆಪ್ಟೆಂಬರ್ 2020, 2:02 IST
ಅಮರ್
ಅಮರ್   

ಭಾಲ್ಕಿ: ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ತಾಲ್ಲೂಕಿನ ಅಮರ ಶಾಲಿವಾನ ಬಿರಾದರ (20) ಈಚೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಅವರ ಮೃತದೇಹ ಮಂಗಳವಾರ ಬೆಳಿಗ್ಗೆ 10ಕ್ಕೆ ಸ್ವಗ್ರಾಮಕ್ಕೆ ಬರಲಿದೆ.

‘ಸೆ.8ರಂದು ನಸುಕಿನ 4.20ಕ್ಕೆ ಹೈದರಾಬಾದ್ ರಾಜೀವಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು. ಬೆಳಿಗ್ಗೆ 10ರ ನಂತರ ಸ್ವಗ್ರಾಮದ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ’ ಎಂದು ಚಿಕ್ಕಪ್ಪ ಪವನ ಬಿರಾದರ ತಿಳಿಸಿದ್ದಾರೆ.

ಪಿಯುನಂತರ ಸ್ಥಳೀಯವಾಗಿ ವೈದ್ಯಕೀಯ ಸೀಟು ದೊರೆಯದ ಕಾರಣ ಹೈದರಾಬಾದ್‍ನ ಖಾಸಗಿ ಏಜೆಂಟ್ ಮೂಲಕ ಅಮರ್ ವರ್ಷದ ಹಿಂದೆ ಉಕ್ರೇನ್‍ಗೆ ತೆರಳಿ, ಅಲ್ಲಿನ ಖಾರಕಿವ್ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಕಾಲೇಜಿನ ವಸತಿ ನಿಲಯದಲ್ಲಿ ತಂಗಿದ್ದ ಅಮರ ಕೊರೊನಾ ಲಾಕ್‍ಡೌನ್ ಕಾರಣ ಫ್ಲ್ಯಾಟ್‌ವೊಂದರಲ್ಲಿ ತಂಗಿದ್ದರು.ಆಗಸ್ಟ್ 28ರಂದು ಏಳು ಅಂತಸ್ತಿನ ಫ್ಲ್ಯಾಟ್‍ನಿಂದ ಕೆಳಗೆ ಬಿದ್ದು, ಅನುಮಾನಸ್ಪದವಾಗಿ ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.