ಜನವಾಡ: ‘ಸರ್ಕಾರದ ಸೌಲಭ್ಯಗಳನ್ನು ಪಡೆಯುವ ದಿಸೆಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಬರುವ ದಿನಗಳಲ್ಲಿ ಜಿಲ್ಲೆಯ ಗ್ರಾಮ, ಹೋಬಳಿ ಹಾಗೂ ಜಿಲ್ಲಾ ಮಟ್ಟದಲ್ಲಿ ಲಿಂಗಾಯತರ ಸಭೆ ನಡೆಸಲಾಗುವುದು’ ಎಂದು ನಿವೃತ್ತ ಪ್ರಾಚಾರ್ಯ ಹಣಮಂತರಾವ್ ಮೈಲಾರೆ ಹೇಳಿದರು.
ಬೀದರ್ ತಾಲ್ಲೂಕಿನ ಕಪಲಾಪುರ (ಎ) ಗ್ರಾಮದಲ್ಲಿ ನಡೆದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಲಿಂಗಾಯತ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಲಿಂಗಾಯತರ ರಾಜಕೀಯ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ, ಎಲ್ಲ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ಪಡೆಯಲು ಏನೇನು ಮಾಡಬೇಕು ಎನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು. ಮುಖಂಡ ನಾಗಭೂಷಣ ಕಮಠಾಣ, ಮುಖಂಡ ಸೂರ್ಯಕಾಂತ ಯದಲಾಪುರೆ ಮಾತನಾಡಿದರು.ರಮೇಶ್ ಮಾತನಾಡಿದರು. ಪ್ರಮುಖರಾದ ಅಶೋಕ ಪಾಟೀಲ, ಬಾಬುರಾವ್, ಶಿವರಾಜ ಪಾಟೀಲ ಕಪಲಾಪುರ, ಶರಣಪ್ಪ ಮಂಟಲೆ ಗಾದಗಿ ಮೊದಲಾದವರು ಪಾಲ್ಗೊಂಡಿದ್ದರು.
ಅ.2 ರಂದು ಸಂಗೋಳಗಿಯಲ್ಲಿ ಮುಂದಿನ ಸಭೆ ನಡೆಸಲು ತೀರ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.