ADVERTISEMENT

ನಮ್ಮೂರ ಹಬ್ಬ: ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 7:19 IST
Last Updated 8 ಫೆಬ್ರುವರಿ 2023, 7:19 IST

ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಫೆಬ್ರುವರಿ 17 ಮತ್ತು 18 ರಂದು ಹಾನಗಲ್ ಗುರು ಕುಮಾರ ಶಿವಯೋಗಿಗಳ 93ನೇ ಪುಣ್ಯಸ್ಮರಣೆ ಮತ್ತು ನಮ್ಮೂರ ಹಬ್ಬ-2023 ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಯಶಸ್ಸಿಗೆ ಎಲ್ಲ ಭಕ್ತರು ಸಹಕರಿಸಬೇಕು ಎಂದು ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಭಾತಂಬ್ರಾ ಗ್ರಾಮದ ನಿರಂಜನ ಜಗದ್ಗುರು ನಿರಂಜನ ಸಂಸ್ಥಾನ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹಾನಗಲ್ ಶಿವಯೋಗಿಗಳು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಇಂದಿನ ಜನಮಾನಸಕ್ಕೆ ಮುಟ್ಟಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಹಾನಗಲ್ ಶಿವಯೋಗಿಗಳ ಪುಣ್ಯಸ್ಮರಣೆ ಜತೆಗೆ ನಮ್ಮೂರ ಹಬ್ಬ ಸಮಾರಂಭ ಸಂಭ್ರ ಮದಿಂದ ಆಚರಣೆ ಮಾಡಲಾಗುತ್ತಿದೆ ಎಂದರು. ಸುವರ್ಣಾ ಸಂಜುಕುಮಾರ ಚಿದ್ರೆ, ಮಹಾಂತೇಶ ಪಾಟೀಲ, ಶೀಲಾ ಶ್ರೀಕಾಂತ ಭೂರಾಳೆ, ವಿಜಯ ಕುಮಾರ ಶರಣಪ್ಪ ಗಾಮಾ ಅವರು ಎರಡು ದಿನದ ಅನ್ನದಾಸೋಹ ಮಾಡುವುದಾಗಿ ತಿಳಿಸಿದರು.

ADVERTISEMENT

ಕಂಟೆಪ್ಪ, ಶ್ರೀಕಾಂತ, ಕಾಶಿನಾಥ ಪಾ ರಣ್ಣ, ವಿಜಯಕುಮಾರ, ಕಾಶಿನಾಥ, ಶಿವಕುಮಾರ, ಸಂಜುಕುಮಾರ, ವೀರ ಶೆಟ್ಟಿ, ವೈಜಿನಾಥ ಟೋಕರೆ, ಪ್ರಭು ಪಂಚಾಕ್ಷರೆ, ಸಂಗಪ್ಪಾ, ತಿರುಮುಕಪ್ಪ ರಾಮಶಟ್ಟೆ ಹಾಗೂ ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.