
ಹುಲಸೂರ: ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ಯೋಗ ಕೇಂದ್ರವನ್ನು ಸ್ಥಾಪಿಸಲು ₹50 ಲಕ್ಷ ಅನುದಾನದ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದ ನಾಗಭೂಷಣ ಶಿವಯೋಗಿಗಳ 56ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಸತ್ಸಂಗ ಸಮ್ಮೇಳನ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪವಾಡ ಪುರುಷರಾದ ನಾಗಭೂಷಣ ಶಿವಯೋಗಿಗಳ ಪವಾಡ ನಮ್ಮ ಕುಟುಂಬದ ಮೇಲೆ ಬಹಳ ಇದೆ. ತಪಸ್ಸು, ಸೇವಾಭಾವನೆ ಮತ್ತು ಸಮಾಜೋದ್ಧಾರ ಕಾರ್ಯಗಳು ಜನರಿಗೆ ಸದಾ ಪ್ರೇರಣಾದಾಯಕ. ಸಮಾಜದಲ್ಲಿ ಶಾಂತಿ, ಸಹಾನುಭೂತಿ ಮತ್ತು ಮನುಷ್ಯತ್ವ ಬೆಳೆಸುವ ಅವರ ಸಂದೇಶಗಳು ಇಂದಿಗೂ ಮಾರ್ಗದರ್ಶಕ ಹೀಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಗೆ ಕೈ ಜೋಡಿಸಬೇಕು’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ‘ಖಂಡ್ರೆ ಅವರ ಕೊಡುಗೆ ನಮ್ಮ ಮಠಕ್ಕೆ ಬಹಳಷ್ಟು ಇದೆ. ಅವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ನಮ್ಮ ಮಠಕ್ಕೆ ಬರಬೇಕು’ ಎಂದರು.
ಪ್ರಮುಖರಾದ ಶಿವರಾಜ ನರಶೆಟ್ಟೆ, ಮಲ್ಲಿಕಾರ್ಜುನ ಪಾಟೀಲ, ಅಶೋಕ ಘಾಳೆ, ಚಂದ್ರಕಾಂತ್ ಪಾಂಚಾಳ, ಬಸಪ್ಪ ಬೇಲೂರೆ, ಗುರುನಾಥ ಹುಡುಗೆ, ಪ್ರಕಾಶ ಭುರೆ, ಬಸವರಾಜ ಪಾಟೀಲ, ಸುರೇಶ ದೇವಪ್ಪ, ಪ್ರಕಾಶ ಕಾಮಶೆಟ್ಟಿ ಸೇರಿ ಕ್ಷೇತ್ರದ ಗಣ್ಯರು, ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.