ಹುಮನಾಬಾದ್: ‘ರಸಗೊಬ್ಬರ ಕೇಳಿದ್ದ ಶಿಕ್ಷಕ ಕುಶಾಲರಾವ ಪಾಟೀಲ ಅವರನ್ನು ಅಮಾನತು ಮಾಡುವ ಮೂಲಕ ಶಿಕ್ಷಕ ಸಮುದಾಯಕ್ಕೆ ಅವಮಾನ ಮಾಡಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಬಿ.ಪಾಟೀಲ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ರಸಗೊಬ್ಬರ ಕೇಳಿರುವುದು ತಪ್ಪೇ?. ಶಿಕ್ಷಕನ ಜತೆ ವಾಗ್ವಾದ ನಡೆಸಿ ಆತನನ್ನು ಅಮಾನತುಗೊಳಿಸಿ ಅಧಿಕಾರದ ದರ್ಪ ತೋರಿಸಲಾಗಿದೆ. ಇದು ಸಲ್ಲ. ವಸ್ತು ಸ್ಥಿತಿ ಅರಿಯದೇ ದ್ವೇಷ ಮನೋಭಾವದಿಂದ ವರ್ತಿಸಿರುವುದು ಅಪರಾಧ. ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉಡಾಫೆ ಉತ್ತರ ನೀಡುವ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಸಮರ್ಪಕ ಗೊಬ್ಬರ ಪೂರೈಸುವುದರ ಜತೆಗೆ ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.