ADVERTISEMENT

ಕನಿಷ್ಠ ಬೆಂಬಲ ಬೆಲೆ | ಭತ್ತ, ಜೋಳ ಖರೀದಿ ಕೇಂದ್ರ ಆರಂಭ: ಶಿಲ್ಪಾ ಶರ್ಮಾ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 4:46 IST
Last Updated 9 ಅಕ್ಟೋಬರ್ 2025, 4:46 IST
<div class="paragraphs"><p>ಶಿಲ್ಪಾ ಶರ್ಮಾ</p></div>

ಶಿಲ್ಪಾ ಶರ್ಮಾ

   

ಬೀದರ್‌: ರಾಜ್ಯ ಸರ್ಕಾರದ ಆದೇಶದಂತೆ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಭತ್ತ ಸಾಮಾನ್ಯ ಪ್ರತಿ ಕ್ವಿಂಟಲ್‌ಗೆ ₹2,369 ಹಾಗೂ ಭತ್ತ-ಗ್ರೇಡ್ ‘ಎ’ ಪ್ರತಿ ಕ್ವಿಂಟಲ್‌ಗೆ ₹2,389, ಬಿಳಿಜೋಳ-ಹೈಬ್ರಿಡ್ ಪ್ರತಿ ಕ್ವಿಂಟಲ್‌ಗೆ ₹3,699 ಮತ್ತು ಬಿಳಿಜೋಳ-ಮಾಲ್ದಂಡಿ ಪ್ರತಿ ಕ್ವಿಂಟಲ್‌ಗೆ ₹3,745ರಂತೆ ತಾಲ್ಲೂಕುವಾರು ನೋಂದಣಿ ಮತ್ತು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಖರೀದಿ ಕೇಂದ್ರಗಳ ವಿವರ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಎಪಿಎಂಸಿ ಯಾರ್ಡ್ ಔರಾದ್ (ಬಿ) (9535795880), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಇಂಡಸ್ಟ್ರಿಯಲ್‌ ಏರಿಯಾ ಬಸವಕಲ್ಯಾಣ (8884563795), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಎ.ಪಿ.ಎಂ.ಸಿ ಯಾರ್ಡ್ ಭಾಲ್ಕಿ (9482872583), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮೈಲೂರ ಬೀದrff (9482872583), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಆರ್.ಟಿ.o ಚೆಕ್ ಪೋಸ್ಟ್ ಹತ್ತಿರ ಹುಮನಾಬಾದ್ (9743430353).

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಸಂಬಂಧಿಸಿದಂತೆ ರೈತರು ಅಕ್ಟೋಬರ್‌ 31ರ ವರೆಗೆ ನೋಂದಣಿ ನಡೆಯಲಿದೆ. ನವೆಂಬರ್‌ 1ರಿಂದ 2026ನೇ ಸಾಲಿನ ಫೆಬ್ರುವರಿ 28ರ ವರೆಗೆ ಭತ್ತ ಖರೀದಿಸಲಾಗುವುದು. ಜೋಳ 2026ರ ಜ. 1ರಿಂದ ಮಾರ್ಚ್‌ 31ರ ಅವಧಿಯಲ್ಲಿ ಖರೀದಿಸಲಾಗುವುದು. ರೈತರು ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ಸ್ ಎಂಬ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರು ನೋಂದಣಿ ಮಾಡಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆಯಿದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ವಿವರ ಸರಿಪಡಿಸಿಕೊಂಡು ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.