ADVERTISEMENT

ಮುಧೋಳ ನಾಯಿ ಭಾರತೀಯ ಸೇನೆಗೆ ಸೇರ್ಪಡೆ: ಎಚ್‌.ಡಿ. ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 15:26 IST
Last Updated 29 ಆಗಸ್ಟ್ 2018, 15:26 IST

ಬೀದರ್: ‘ಮುಧೋಳ ಬೇಟೆ ನಾಯಿ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡಿದೆ’ ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಎಚ್‌.ಡಿ. ನಾರಾಯಣಸ್ವಾಮಿ ಹೇಳಿದರು.

‘ಕರ್ನಾಟಕದ ಶ್ವಾನ ತಳಿಗೆ ಸೇನೆಯಲ್ಲಿ ಅವಕಾಶ ದೊರೆತಿರುವುದು ವಿಶೇಷವಾಗಿದೆ. ಯಾವುದೇ ವಾತಾವರಣಕ್ಕೆ ಒಗ್ಗಿಕೊಳ್ಳುವ ಹಾಗೂ ಗುರಿ ತಲುಪುವ ಸಾಮರ್ಥ್ಯ ಮುಧೋಳ ಬೇಟೆ ನಾಯಿಗೆ ಇದೆ. ತಾಂತ್ರಿಕ ಕಾರಣದಿಂದ ಸೇನೆಯಲ್ಲಿ ಸೇರಿಸಿಕೊಂಡಿರಲಿಲ್ಲ. ಸೇನೆಯ ಅಧಿಕಾರಿಗಳು ಕೇಳಿದ ಪೂರ್ಣ ಮಾಹಿತಿ ಪೂರೈಸಿದ ನಂತರ ಸೇನೆಯಲ್ಲಿ ಸೇರಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ದೇಸಿ ತಳಿಯಾಗಿರುವ ಕಾರಣ ತರಬೇತಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ತರಬೇತಿ ಅವಧಿಯಲ್ಲಿ ಸಹಜವಾಗಿಯೇ ಬೌದ್ಧಿಕ ಬೆಳವಣಿಗೆಯಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಮಹಾರಾಷ್ಟ್ರದ ರಾಹುರಿ ಮಹಾತ್ಮ ಫುಲೆ ಕೃಷಿ ವಿದ್ಯಾಪೀಠ ಸಹ ಮುಧೋಳ ಶ್ವಾನ ತಳಿಗಳನ್ನು ಕೇಳಿದೆ’ ಎಂದು ತಿಳಿಸಿದರು.

‘ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವದಲ್ಲಿ ದೇವಣಿ ತಳಿ ಅಭಿವೃದ್ಧಿ ಮಾಡಲಾಗುತ್ತಿದೆ. ತಳಿಗಳನ್ನು ಬೆಳೆಸಿ ರೈತರಿಗೆ ಕಡಿಮೆಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.