ADVERTISEMENT

ಹುಲಸೂರ | ಹಿಂದೂ–ಮುಸ್ಲಿಂ ಭಾವೈಕ್ಯದ ಮೊಹರಂ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 6:43 IST
Last Updated 16 ಜುಲೈ 2024, 6:43 IST
ಹುಲಸೂರ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾದ ಅಲಾಯಿ ದೇವರು
ಹುಲಸೂರ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾದ ಅಲಾಯಿ ದೇವರು   

ಹುಲಸೂರ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮೊಹರಂ ಹಿಂದೂ–ಮುಸ್ಲಿಮರ ಭಾವೈಕ್ಯದಿಂದ ಆಚರಿಸುತ್ತಿದ್ದಾರೆ.

ಪಟ್ಟಣದ ಮುಲ್ಲಾ ಮಜೀದ ಪೀರ, ಫಾಟಕ ಪೀರ, ಬಡಾ ಬಜಾರ ಪೀರ ಮೂರು ಕಡೆ ಸೇರಿದಂತೆ ತಾಲ್ಲೂಕಿನ ಬೇಲೂರ, ತೊಗಲೂರ, ಮೀರಖಲ್, ವಾಂಝರವಾಡಿ, ಮೆಹಕರ, ಅಳವಾಯಿ, ಹಲಸಿ ತೂಗಾಂವ್, ವಾಂಝರಖೇಡ, ದೇವನಾಳ್, ಹಾಲಹಳ್ಳಿ ಗ್ರಾಮಗಳಲ್ಲಿ ದೇವರು ಕುರಿಸಲಾಗಿದೆ. ಸಂಜೆ ವೇಳೆ ಭಕ್ತರು ಮೊಹರಂ ಹಾಡುಗಳನ್ನು ಹಾಡಿ ಹೆಜ್ಜೆಗಳನ್ನು ಹಾಕುತ್ತಿದ್ದಾರೆ.

‘ಮೊಹರಂ ಆಚರಣೆಯಲ್ಲಿ ಅಲಾಯಿ ದೇವರನ್ನು ಭಕ್ತಿಯಿಂದ ಆರಾಧಿಸಿ, ಕೂಡಿಸುತ್ತಾರೆ. ಹೊಳೆಗೆ ಕಳುಹಿಸುವವರೆಗೂ ಒಂದಿಲ್ಲೊಂದು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಮೊಹರಂ ಕೊನೆ ದಿನದವರೆಗೆ ಅಂದರೆ ಗುದ್ದಲಿ ಹಾಕಿದ ದಿನದಿಂದ ಕಳ್ಳಳ್ಳಿ, ಹುಲಿ, ಕರಡಿ ವೇಷಧಾರಿಗಳ ಹಳ್ಳಿ ಹಳ್ಳಿಗಳಲ್ಲಿ ಸುತ್ತುವ ಮೂಲಕ ಭಕ್ತರು ಕೊಡುವ ಧಾನ್ಯ, ಹಣವನ್ನು ಸಂಗ್ರಹಿಸಿಕೊಂಡು ಅಂತಿಮ ದಿನ ವಿಶೇಷ ಪೂಜೆ ಸಲ್ಲಿಸಿ, ತಮ್ಮ ವೇಷದಿಂದ ತ್ಯಜಿಸುತ್ತಾರೆ. ಅಲಾಯಿ ದೇವರ ಸವಾರಿ ಹೊತ್ತುಕೊಂಡು ಮೈಯಲ್ಲಿ ದೇವರ ಪರಕಾಯ ಪ್ರವೇಶ ಮಾಡಿದಂತೆ ಕಂಡು ಬರುತ್ತದೆ ಎಂದು ಸಮಾಜದ ಮುಖಂಡ ಗುಲಾಮ ಬಡಾಯಿ ‘ಪ್ರಜಾವಾಣಿ’ ತಿಳಿಸಿದರು.

ADVERTISEMENT

ಮೆರವಣಿಗೆಯಲ್ಲಿ ‘ದುಲ್ಹೇ’ ಎಂದು ಹೇಳಿ ಯುವಕರ ಮುಂದೆ ಓಡಿದರೆ ಉಗ್ರಗೊಳ್ಳುವ ದೇವರು ಬೆನ್ನಟ್ಟಿತ್ತಿದ್ದರು. ಅಷ್ಟರಲ್ಲಿಯೇ ಚೆಲ್ಲಾಪಿಲ್ಲಿಯಾಗುವ ಜನರು, ಅಷ್ಟರಲ್ಲಿಯೇ ಭಕ್ತರ ಮನೆ ಆಗಮನ ಅಲ್ಲಿ ನೀರು, ಸಕ್ಕರೆ, ಬೆಲ್ಲ ನೀಡಿ ಪ್ರಾರ್ಥನೆ ಸಲ್ಲಿಸುವುದು ಹೀಗೆ ಮೊಹರಂ ಹಬ್ಬಗೆ ಮೆರವಣಿಗೆಯುದ್ದಕ್ಕೂ ಇಂತಹ ದೃಶ್ಯಗಳು ಕಂಡು ಬರುತ್ತವೆ.

ದಫನ್‌ಗೂ ಮುನ್ನವಾದ ನಸುಕಿನ ಜಾವದಲ್ಲಿ ಅಲಾಯಿ ದೇವರ ಮೆರವಣಿಗೆಗಳು ಖುರೇಶಿ ಕಾಲೊನಿ, ವಡ್ಡರ ಗಲ್ಲಿ, ಗಾಂಧಿಚೌಕ, ಗುರುಬಸವೇಶ್ವನಗರ ಮಠ , ಬಸವೇಶ್ವರ ಕಟ್ಟೆ ಹೀಗೆ ಹಲವಾರು ಪ್ರದೇಶಗಳಲ್ಲಿ ದೇವರುಗಳ ಮೆರವಣಿಗೆ ಅತ್ಯಂತ ಜೋರಾಗಿ ನಡೆಯುತ್ತದೆ. ಹಲವು ನಂಬಿಕೆಗಳನ್ನು ಹೊಂದಿ, ಬರೀ ಮುಸ್ಲಿಂ ಅಲ್ಲದೆ ಹಿಂದೂಗಳೇ ಹೆಚ್ಚಾಗಿ ಆಚರಿಸುವ ಹಬ್ಬ ಇದಾಗಿದೆ.

ಹುಲಸೂರನಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಪೀರ್‌ಗಳ ಅದ್ಧೂರಿ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.