ADVERTISEMENT

ಜನವಾಡ: ಪೀರ್‌ಗಳಿಗೆ ಶ್ರದ್ಧಾ, ಭಕ್ತಿಯ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:26 IST
Last Updated 10 ಆಗಸ್ಟ್ 2022, 4:26 IST
ಬೀದರ್ ತಾಲ್ಲೂಕಿನ ಮರಕಲ್‍ನಲ್ಲಿ ಮೊಹರಂ ಅಂಗವಾಗಿ ಪೀರ್‌ಗಳ ಮೆರವಣಿಗೆ ನಡೆಯಿತು
ಬೀದರ್ ತಾಲ್ಲೂಕಿನ ಮರಕಲ್‍ನಲ್ಲಿ ಮೊಹರಂ ಅಂಗವಾಗಿ ಪೀರ್‌ಗಳ ಮೆರವಣಿಗೆ ನಡೆಯಿತು   

ಜನವಾಡ: ತ್ಯಾಗ, ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ಬೀದರ್ ತಾಲ್ಲೂಕಿನ ವಿವಿಧೆಡೆ ಹಿಂದೂ-ಮುಸ್ಲಿಮರು ಭಾವೈಕ್ಯದಿಂದ ಆಚರಿಸಿದರು.

ಮರಕಲ್: ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಮೂರು ಪೀರ್‌ಗಳಿಗೆ ಜನ ಶ್ರದ್ಧೆ, ಭಕ್ತಿಯಿಂದ ಪೂಜೆ ಸಲ್ಲಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಪೀರ್‌ಗಳ ಮೆರವಣಿಗೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಂಡರು. ಪ್ರಮುಖರಾದ ಪ್ರಕಾಶ ಗೋಧೆಹಿಪ್ಪರ್ಗೆ, ಗುರುನಾಥ, ಗಫೂರಮಿಯ, ಲೋಕೇಶ್ ಮರಕಲ್, ಸತೀಶ್ ಪಾರಾ, ಸಿದ್ದಪ್ಪ ಗೋಧೆಹಿಪ್ಪರ್ಗೆ, ಗುಂಡಪ್ಪ ಪಾಟೀಲ, ಯುನುಸ್‍ಮಿಯ, ಫಹೀಮ್, ಮೈಬೂಬ್ ಪಾಲ್ಗೊಂಡಿದ್ದರು.

ಬಾವಗಿ: ಗ್ರಾಮದಲ್ಲಿ ಜಿಟಿ ಜಿಟಿ ಮಳೆಯ ಮಧ್ಯೆಯೂ ಪೀರ್‌ಗಳ ಮೆರವಣಿಗೆ ನಡೆಯಿತು. ಇಸಾಕ್ ಸಾಹೇಬ್, ನಜೀರ್ ಸಾಹೇಬ್, ಮುಕ್ತಾರ್ ಸಾಹೇಬ್, ಗುರುಭದ್ರೇಶ್ವರ ಸಂಸ್ಥಾನ ಮಠದ ಭದ್ರಯ್ಯ ಸ್ವಾಮಿ, ಶಾಂತಕುಮಾರ ಸ್ವಾಮಿ, ಕಾಶೆಪ್ಪ ಅವಂಟಿ, ರೇವಣಪ್ಪ ಭದ್ರಣ್ಣ, ಯುವ ಮುಖಂಡ ಲೋಕೇಶ ಕನಶೆಟ್ಟಿ, ರಮೇಶ ಹಜರಿ, ಆನಂದ ಸ್ವಾಮಿ, ಗುಂಡಯ್ಯ ಸ್ವಾಮಿ, ಪ್ರಭು ಹಜ್ಜರಗಿ ಪಾಲ್ಗೊಂಡಿದ್ದರು. ಸಿರ್ಸಿ(ಎ) ಗ್ರಾಮದಲ್ಲಿ ನಡೆದ ಪೀರ್‌ಗಳ ಮೆರವಣಿಗೆಯಲ್ಲಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡರೆ, ಕಾಶೆಂಪುರ (ಪಿ) ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾಸಕ ಬಂಡೆಪ್ಪ ಕಾಶೆಂಪುರ ಅಲಾಯಿ ಆಡಿ ಗಮನ ಸೆಳೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.