ಬೀದರ್: ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ತಂಗಿಯನ್ನು ಪೀಡಿಸುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಸಿಂಗಾರಬಾಗ್‌ದ ಅಮಿರ್‌ಖಾನ್ ಮೊಜಮ್‌ಖಾನ್ (20) ಕೊಲೆಯಾದ ಯುವಕ. ಪನ್ಸಾಲ್ ತಾಲೀಂನ ಝೀಷಾನ್ ಕೊಲೆ ಮಾಡಿದ್ದಾನೆ. ಅಮಿರ್‌ಖಾನ್, ಝೀಷಾನ್ ತಂಗಿಯನ್ನು ಪ್ರೀತಿಸುತ್ತಿದ್ದ. ಮದುವೆ ನಂತರವೂ ಆಕೆಯನ್ನು ಪೀಡಿಸಲು ಶುರು ಮಾಡಿದ್ದ ಎನ್ನಲಾಗಿದೆ. ಅಮಿರ್‌ಖಾನ್ ಓಲ್ಡ್‌ಸಿಟಿ ಅಂಗಡಿಯೊಂದರಲ್ಲಿ ಇರುವುದನ್ನು ತಿಳಿದು ಅಲ್ಲಿಗೆ ಬಂದ ಝೀಷಾನ್ ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಚಾಕುವಿನಿಂದ ಇರಿಯುವ ದೃಶ್ಯ ಅಂಗಡಿಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೌಬಾರಾದ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.