ADVERTISEMENT

ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:15 IST
Last Updated 27 ಜೂನ್ 2025, 16:15 IST
ಬೀದರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ಉಪವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್‌ ಉದ್ಘಾಟಿಸಿದರು
ಬೀದರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ಉಪವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್‌ ಉದ್ಘಾಟಿಸಿದರು   

ಬೀದರ್‌: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ಉಪವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್, ಜಿಲ್ಲಾ ಒಕ್ಕಲಿಗ (ಕುಡು ಒಕ್ಕಲಿಗ) ಜಿಲ್ಲಾ ಶಾಖೆಯ ಪದಾಧಿಕಾರಿಗಳಾದ ಸೋಮನಾಥ ಬಿ.ಸಂತಪೂರೆ, ಪ್ರಭುರಾವ ಪಾಟೀಲ, ಅನೀಲಕುಮಾರ ವಿ.ಅಟಂಗೆ, ರಮೇಶ ವಿ.ಬಿರಾದಾರ, ಮಲ್ಲಿಕಾರ್ಜುನ ಎನ್. ಜೀವಣಗಿ, ರವೀಂದ್ರ ಹಲ್ಲಾಳೆ, ಸಿದ್ರಾಮ ಕಲಬುರಗೆ, ಶರಣಪ್ಪಾ ದರೆ, ಸುನೀಲಕುಮಾರ ಪರಗೊಂಡೆ, ನಾಗಶೆಟ್ಟಿ ಅಟಂಗೆ, ರೇಖಾ ಪ್ರಕಾಶ, ಸರಸ್ವತಿ ಸೋಮನಾಥ, ಸಿದ್ದಪ್ಪ ಶಾಮರಾವ್‌, ಈರಣ್ಣ ಭೀಮರಾವ್‌, ಸೂರ‍್ಯಕಾಂತ ಇದ್ದರು.

ಕನ್ನಡಿಗರ ರಕ್ಷಣಾ ವೇದಿಕೆ ಬೀದರ್‌ ಜಿಲ್ಲಾ ಘಟಕ:

ADVERTISEMENT

ಸಂಘಟನೆಯಿಂದ ನಗರದ ಕನ್ನಡಾಂಬೆ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಆಚರಿಸಲಾಯಿತು. 

ನಾಡ ಧ್ವಜ ಹಾರಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಗೌರವ ಅರ್ಪಿಸಿದರು. ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ ಮಾತನಾಡಿ, ಕನ್ನಡಿಗರ ಸಾರ್ವಭೌಮತೆ, ಸ್ವಾಭಿಮಾನ‌, ಕೀರ್ತಿ ಹೆಚ್ಚಿಸಿದವರು ಕೆಂಪೇಗೌಡರು ಎಂದರು.

ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ ಭವಾನಿ, ಜಿಲ್ಲಾ ಗೌರವ ಅಧ್ಯಕ್ಷ ಸುರೇಶ ಕನ್ನಾಳೆ, ಜಿಲ್ಲಾ ಉಪಾಧ್ಯಕ್ಷ ಆನಂದ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ್ರವೀಣಕುಮಾರ ಭಾಗ್ಯನೋರ, ಜಿಲ್ಲಾ ಸಹ ಕಾರ್ಯದರ್ಶಿ ಮಾಣಿಕ ಮೇತ್ರೆ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಈಶ್ವರ ಯರನಳ್ಳಿ, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಮೋರ್ಗಿಕರ್ ಮತ್ತಿತರರು ಇದ್ದರು.

ಕನ್ನಡಿಗರ ರಕ್ಷಣಾ ವೇದಿಕೆಯಿಂದ ಬೀದರ್‌ನ  ಕನ್ನಡಾಂಬೆ ವೃತ್ತದಲ್ಲಿ ಶುಕ್ರವಾರ ಕೆಂಪೇಗೌಡರ ಜಯಂತಿ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.