ADVERTISEMENT

ಮಾದಕ ದ್ರವ್ಯದ ದುಷ್ಪರಿಣಾಮ: ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 15:09 IST
Last Updated 11 ಜನವರಿ 2019, 15:09 IST
ಬೀದರ್‌ನಲ್ಲಿ ನಡೆದ ಮಾದಕ ದೃವ್ಯ ಸೇವನೆಯ ದುಷ್ಪರಿಣಾಮ ಕುರಿತ ಜಾಗೃತಿ ಜಾಥಾದಲ್ಲಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಿದ ಯಮನ ವೇಷಧಾರಿ
ಬೀದರ್‌ನಲ್ಲಿ ನಡೆದ ಮಾದಕ ದೃವ್ಯ ಸೇವನೆಯ ದುಷ್ಪರಿಣಾಮ ಕುರಿತ ಜಾಗೃತಿ ಜಾಥಾದಲ್ಲಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಿದ ಯಮನ ವೇಷಧಾರಿ   

ಬೀದರ್: ಜಿಲ್ಲಾ ಪೊಲೀಸ್ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತ ಜಾಗೃತಿ ಜಾಥಾ ನಡೆಯಿತು.

ಅಂಬೇಡ್ಕರ್‌ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಜಾಥಾಕ್ಕೆ ಚಾಲನೆ ನೀಡಿದರು. ಅಲ್ಲಿಂದ
ಪ್ರಮುಖ ಮಾರ್ಗಗಳ ಮೂಲಕ ಜಾಥಾ ಝೀರಾ ಫಂಕ್ಷನ್ ಹಾಲ್‌ಗೆ ತಲುಪಿ ಸಮಾರೋಪಗೊಂಡಿತು.

‘ವಾಹನಗಳಲ್ಲಿ ಅಧಿಕ ಭಾರ, ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯದಿರಿ, ಹೆಲ್ಮೇಟ್ ಧರಿಸಿ ಪ್ರಾಣ, ಉಳಿಸಿ, ಅತಿವೇಗದ ಪ್ರಯಾಣ ಅಪಘಾತಕ್ಕೆ ಆಹ್ವಾನ, ವಾಹನ ಚಲಾಯಿಸುವಾಗ ಮೊಬೈಲ್ ಬಳಸದಿರಿ ಎಂಬಿತ್ಯಾದಿ ಘೋಷಣಾ ಫಲಕಗಳು ಜಾಥಾದಲ್ಲಿ ಗಮನ ಸೆಳೆದವು.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಬೀದರ್‌ ಡಿವೈಎಸ್‌ಪಿ ಎಸ್.ವೈ.ಹುಣಸಿಕಟ್ಟಿ, ಪಿಸಿಐಬಿ ಘಟಕದ ಪೊಲೀಸ್‌ ಇನ್‌ಸ್ಪೆಕ್ಟರ್‌ಸತೀಶ ಕಾಂಬಳೆ, ಧಾರವಾಡದ ಉತ್ತರ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ್‌, ಬೀದರ್ ಅಂಚೆ ಅಧೀಕ್ಷಕ ವಿ.ಎಸ್.ಎಲ್.ನರಸಿಂಹರಾವ್, ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.