ADVERTISEMENT

ಬೀದರ್‌: ರಾಷ್ಟ್ರೀಯ ವಿಜ್ಞಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 14:29 IST
Last Updated 7 ಮಾರ್ಚ್ 2022, 14:29 IST
ಬೀದರ್‌ನ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು
ಬೀದರ್‌ನ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು   

ಬೀದರ್‌: ನಗರದ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.

ಉಪ ಪ್ರಾಚಾರ್ಯ ಪ್ರೊ.ಅನಿಲಕುಮಾರ ಅಣದೂರೆ, ಸಂಪನ್ಮೂಲ ವ್ಯಕ್ತಿ ಪ್ರೊ. ಪ್ರವೀಣಕುಮಾರ ಪಿ, ಪ್ರೊ.ಮಲ್ಲಿಕಾರ್ಜುನ ಚೆನ್ಮಲ್ ಮಾತನಾಡಿದರು.

ಡಾ.ವಿ.ಎಂ. ಚೆನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ದೀಪಾ ರಾಗಾ, ಪ್ರೊ.ಲತಾ ಎಸ್. ಇದ್ದರು.

ADVERTISEMENT

ಅದಿತಿ ಕುಲತೆ ಪರಿಸರಗೀತೆ ಹಾಡಿದರು. ರಾಧಾ ಬಿ ಸ್ವಾಗತಿಸಿದರು. ಗೀತಾ ನಿರೂಪಿಸಿದರು. ದಿವ್ಯಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.