ADVERTISEMENT

ನ್ಯೂರೋ ಚಿಕಿತ್ಸಾ ಶಿಬಿರ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:07 IST
Last Updated 5 ಮಾರ್ಚ್ 2021, 2:07 IST
ಸೂರ್ಯಕಾಂತ ರಾಮಶೆಟ್ಟಿ
ಸೂರ್ಯಕಾಂತ ರಾಮಶೆಟ್ಟಿ   

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಹಾಗೂ ಸ್ಪರ್ಶ ಆಸ್ಪತ್ರೆ ವತಿಯಿಂದ ನಗರದ ಬಿ.ವಿ.ಬಿ. ಕಾಲೇಜು ರಸ್ತೆಯಲ್ಲಿ ಇರುವ ರಾಮಚೌಕ್ ಸಮೀಪದ ಸ್ಪರ್ಶ ಆಸ್ಪತ್ರೆಯಲ್ಲಿ ಮಾರ್ಚ್ 5ರಿಂದ 11ರ ವರೆಗೆ ಅಕ್ಯೂಪ್ರೆಶರ್ ಹಾಗೂ ನ್ಯೂರೋ ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ದೇಹದ ಅತಿಭಾರ, ಸಂಧಿವಾತ, ಮೊಣಕಾಲು ನೋವು, ಮಧುಮೇಹ, ಪತ್ತವಾತ, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ, ಅರ್ಧ ತಲೆ ನೋವು, ರಕ್ತದೊತ್ತಡ, ಅಜೀರ್ಣ, ಕೀಲು ನೋವು, ಬೆನ್ನು ಹುರಿ ನೋವು, ಮಲಬದ್ಧತೆ ಮೊದಲಾದ ಕಾಯಿಲೆಗಳಿಗೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ತಿಳಿಸಿದ್ದಾರೆ.

ರಾಜಸ್ಥಾನದ ಡಾ. ರಾಮಮನೋ ಹರ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನದ ಡಾ. ವಿಕ್ರಮ್ ಮಶಾಲ್, ಡಾ. ಭೂಪೇಂದ್ರ ಚೌಧರಿ ಹಾಗೂ ಡಾ. ದೀಪಕ್ ಸಿಂಗ್ ಅವರು ಚಿಕಿತ್ಸೆ ಕೊಡಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಹಾಗೂ ಸಂಜೆ 4 ರಿಂದ ರಾತ್ರಿ 8 ರ ವರೆಗೆ ಶಿಬಿರ ನಡೆಯಲಿದೆ. ಜಿಲ್ಲೆಯ ರೋಗಿಗಳು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9448320571, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ (9980650022), ಸ್ಪರ್ಶ ಆಸ್ಪತ್ರೆಯ ಡಾ. ಲೋಕೇಶ ಹಿರೇಮಠ (8951739809) ಅಥವಾ ನಾಗನಾಥ ಪಾಟೀಲ (9849332855) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.