ADVERTISEMENT

ಒಂದೇ ವಾರ್ಡ್‌ನ ಇಬ್ಬರಿಗೆ ಕೋವಿಡ್‌; ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:41 IST
Last Updated 4 ಜನವರಿ 2022, 6:41 IST
ಹುಲಸೂರ ಪಟ್ಟಣದ 9ನೇ ವಾರ್ಡ್‌ನಲ್ಲಿ 5 ಜನರಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ಬಡಾವಣೆಯನ್ನು ಸೀಲ್‌ಡೌನ್‌ ಮಾಡಲಾಯಿತು
ಹುಲಸೂರ ಪಟ್ಟಣದ 9ನೇ ವಾರ್ಡ್‌ನಲ್ಲಿ 5 ಜನರಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ಬಡಾವಣೆಯನ್ನು ಸೀಲ್‌ಡೌನ್‌ ಮಾಡಲಾಯಿತು   

ಹುಲಸೂರ: ಪಟ್ಟಣದ 9ನೇ ವಾರ್ಡ್‌ನ ಇಬ್ಬರಿಗೆ ಸೋಮವಾರ ಕೋವಿಡ್ ದೃಢಪಟ್ಟಿದ್ದು, ಬಡಾವಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

16 ವರ್ಷದ ಯುವಕ ಹಾಗೂ 13 ವರ್ಷದ ಯುವತಿಗೆ ಕೋವಿಡ್ ದೃಢಪಟ್ಟಿದೆ. ಬೆಂಗಳೂರಿನಿಂದ ಈಚೆಗೆ ಮದುವೆಗೆ ಬಂದಿದ್ದ ಇನ್ನೂ ಮೂವರಿಗೆ ಕೋವಿಡ್‌ ದೃಢಪಟ್ಟಿತ್ತು, ಅವರು ಚಿಕಿತ್ಸೆಗೆ ಬೆಂಗಳೂರಿಗೆ ಮರಳಿದ್ದಾರೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಅರಿಫೋದ್ದೀನ್ ದೃಢಪಡಿಸಿದ್ದಾರೆ.

ತಾಲ್ಲೂಕು ಆಡಳಿತ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ವಾರ್ಡ್‌ಗೆ ಆಗಮಿಸಿ ಸೀಲ್‌ಡೌನ್‌ ಡೌನ್ ಮಾಡಿಸಿ, ಓಣಿಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಹೊರಗಿನವರಿಗೆ ಓಣಿಯಲ್ಲಿ ಪ್ರವೇಶ ನಿರಾಕರಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ತಿಳಿಸಿದ್ದರು.

ADVERTISEMENT

ಇದೇ ಸಂದರ್ಭದಲ್ಲಿ ಪಿಎಸ್ಐ ಗೌತಮ್ ಗುತ್ತೆದಾರ, ಆರ್.ಐ.ಮೌನೇಶ್ವರ ಸ್ವಾಮಿ, ತಲಾಟಿ ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.