ADVERTISEMENT

13 ರಿಂದ ನೀನಾಸಂ ರಂಗತೋರಣ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 14:08 IST
Last Updated 10 ಡಿಸೆಂಬರ್ 2018, 14:08 IST

ಬೀದರ್: ನೀನಾಸಂ ಸಹಕಾರದೊಂದಿಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಡಿಸೆಂಬರ್ 13, 14 ಮತ್ತು 15 ರಂದು ರಂಗತೋರಣ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣದ ರಾಜ್ಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ಕಲ್ಯಾಣ ರಂಗತೋರಣದ ಸದಸ್ಯ ಶಶಿಧರ ಹೊಸಳ್ಳಿ ತಿಳಿಸಿದರು.

ಬೆಂಗಳೂರು, ಮೈಸೂರು, ಶಿವಮೊಗ್ಗದಂತಹ ನಗರಗಳಲ್ಲಿಯೇ ಹೊಸ ಹೊಸ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಹೀಗಾಗಿ ರಂಗತೋರಣವು ಪ್ರತಿ ವರ್ಷ ನಾಡಿನ ಪ್ರಮುಖ ರಂಗ ತಂಡಗಳನ್ನು ಆಹ್ವಾನಿಸಿ, ಈ ಭಾಗದಲ್ಲಿ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದೆ. ರಂಗಮದಿರದಲ್ಲಿ ಮೂರು ದಿನಗಳ ಕಾಲ ಪ್ರತಿ ದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸೋಮವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

13 ರಂದು ಬೆಳಗಾವಿಯ ಮಹಾಂತೇಶ ರಾಮದುರ್ಗ ಸೈ ನಿರ್ದೇಶನದ ‘ದೂರದೇಶದ ಹಕ್ಕಿ’, 14 ರಂದು ರಂಗ ನಿರ್ದೇಶಕ ಕೆ.ವಿ.ಅಕ್ಷರ ನಿರ್ದೇಶನದ ‘ಸೇತುಬಂಧನ’ ಹಾಗೂ 15 ರಂದು ಜೋಸೆಫ್‌ ಜಾನ್‌ ನಿರ್ದೇಶನದ‘ಆಶ್ಚರ್ಯ ಚೂಡಾಮಣಿ’ ನಾಟಕ ಪ್ರದರ್ಶನಗೊಳ್ಳಲಿದೆ.

ADVERTISEMENT

ಅಂಬರೀಷ ಬಟನಾಪೂರೆ, ವೀರೇಶ ಸ್ವಾಮಿ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.