
ಪ್ರಜಾವಾಣಿ ವಾರ್ತೆ
ಜನವಾಡ: ಜ್ಞಾನಸುಧಾ ಪದವಿ ಕಾಲೇಜು ಹಾಗೂ ಬೀದರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೀದರ್‌ನ ಬಸವಗಿರಿಯಲ್ಲಿ ಈಚೆಗೆ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ನಡೆಯಿತು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಶಿಬಿರಕ್ಕೆ ಚಾಲನೆ ನೀಡಿದರು. ನಿರ್ದೇಶಕ ಮುನೇಶ್ವರ ಲಾಖಾ, ಪ್ರಾಚಾರ್ಯ ಚನ್ನವೀರ ಪಾಟೀಲ, ಎನ್.ಎಸ್.ಎಸ್. ಅಧಿಕಾರಿ ಗಿರಿಧರ ಬಿ.ಎಚ್. ಇದ್ದರು.
ಶಿಬಿರದ ನಿಮಿತ್ತ ಉಪನ್ಯಾಸ, ಶ್ರಮದಾನ ಮೊದಲಾದ ಚಟುವಟಿಕೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.