ಕಮಲನಗರ: ತಾಲ್ಲೂಕಿನ ವಿವಿಧ ಶಾಲೆಗಳಿಗೆ ಮಂಗಳವಾರ ಭೇಟಿ ನೀಡಿದ ಬಿಆರ್‌ಸಿ ಪ್ರಕಾಶ ರಾಠೋಡ ನೇತೃತ್ವದ ಅಧಿಕಾರಿಗಳು, ಶಾಲೆಗಳಲ್ಲಿನ ಮೂಲಸೌಕರ್ಯ ಹಾಗೂ ಮಕ್ಕಳ ದಾಖಲಾತಿ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಬಿಆರಸಿ ಪ್ರಕಾಶ ರಾಠೋಡ, ಸರ್ಕಾರಿ ಶಾಲೆಗಳಲ್ಲಿ ಆರಂಭಿಕ ಹಂತದಿಂದಲೇ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತಮಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಮಿಂಚಿನ ಸಂಚಾರ ಹಮ್ಮಿಕೊಂಡು ಶಾಲೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಮದನೂರ, ಖತಗಾಂವ, ಡೋಣಗಾಂವ(ಎಂ), ಬೆಳಕೋಣಿ(ಭೋ), ಕೋಟಗ್ಯಾಳ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರ ಬೋಧನೆ ಮಾಡುವ ಪದ್ಧತಿ, ಪಾಠ ಟಿಪ್ಪಣಿ, ವಾರ್ಷಿಕ ದಾಖಲೆ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಹಾಗೂ ಸೇತುಬಂಧ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಯಿತು.
ಸಿಆರ್‌ಸಿಗಳಾದ ರೋಹಿದಾಸ ಮೇತ್ರೆ, ವೆಂಕಟರಾವ ನಾಗಲಗಿದ್ದೆ, ಶಿಕ್ಷಕರಾದ ಗಣಪತರಾವ ದೇವಕತ್ತೆ, ಗೋವಿಂದರಾವ ಮಸೋಟೆ, ಸುಧಾಕರ ಬಾಬರೆ, ಮಾರುತಿ ರೇಡ್ಡಿ, ದಿಲೀಪ ವಾನಖೇಡೆ, ಸರಸ್ವತಿ ಡೊಂಗರೆ, ಸುಭಾಷ ಹಾಗೂ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.