ADVERTISEMENT

ಆಭರಣಗಳ ಪ್ರದರ್ಶನ ಆರಂಭ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 16:33 IST
Last Updated 8 ಮಾರ್ಚ್ 2019, 16:33 IST
ಬೀದರ್‌ನ ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ ಮಳಿಗೆಯಲ್ಲಿ ಶುಕ್ರವಾರ ಆರಂಭವಾದ ಆಭರಣಗಳ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಚಾಲನೆ ನೀಡಿದರು. ಮನ್ಸೂರ್, ಅಶೋಕ ಖೇಣಿ, ರೇಷ್ಮಾ ಕೌರ್, ಡಾ.ಶಾರದಾ ಗುದುಗೆ ಹಾಗೂ ಮುಖ್ಯಸ್ಥ ಸರ್ಫರಾಜ್ ಇದ್ದಾರೆ

ಬೀದರ್: ಕಲಾತ್ಮಕ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ನಗರದ ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ ಮಳಿಗೆಯಲ್ಲಿ ಶುಕ್ರವಾರ ಆರಂಭವಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯ ಜನರಿಗೆ ಇದೊಂದು ಹೊಸ ಅನುಭವ ನೀಡಲಿದೆ. ಆಸಕ್ತರಿಗೆ ಆಭರಣಗಳನ್ನು ಖರೀದಿಸಲು ಅನುಕೂಲವಾಗಿದೆ’ ಎಂದು ಹೇಳಿದರು.

ಬೀದರ್‌ ಶಾಖೆಯ ಮುಖ್ಯಸ್ಥ ಸರ್ಫರಾಜ್ ಮಾತನಾಡಿ, ‘ಪ್ರದರ್ಶನದಲ್ಲಿರುವ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಆಭರಣಗಳು ಹಾಗೂ ಕೈ ಕುಶಲತೆಯ ಸೊಬಗಿನ ಪಾರಂಪರಿಕ ಆಭರಣಗಳು ಮಾರಾಟಕ್ಕೆ ಲಭ್ಯ ಇವೆ’ ಎಂದು ತಿಳಿಸಿದರು.

ADVERTISEMENT

ಮಾಜಿ ಶಾಸಕ ಅಶೋಕ ಖೇಣಿ, ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್, ಡಾ.ಶಾರದಾ ಗುದುಗೆ, ಮಲಬಾರ್ ಗೋಲ್ಡ್ ನ ಕಲಬುರ್ಗಿ ಶಾಖೆಯ ಮನ್ಸೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.