ADVERTISEMENT

ಅಟಲ್‌ಜಿ ಕೇಂದ್ರದ ಮುಂದೆ ಜನರ ಪರದಾಟ

ಹುಲಸೂರ: ಪದೇ ಪದೇ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 4:23 IST
Last Updated 1 ಜುಲೈ 2021, 4:23 IST
ಹುಲಸೂರಿನ ಅಟಲ್‌ಜಿ ಜನಸ್ನೇಹಿ ಕೇಂದ್ರದ ಮುಂದೆ ಸರದಿಯಲ್ಲಿ ಕುಳಿತ ಜನ
ಹುಲಸೂರಿನ ಅಟಲ್‌ಜಿ ಜನಸ್ನೇಹಿ ಕೇಂದ್ರದ ಮುಂದೆ ಸರದಿಯಲ್ಲಿ ಕುಳಿತ ಜನ   

ಹುಲಸೂರ: ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಅಟಲ್‌ಜಿ ಜನಸ್ನೇಹಿ ಕೇಂದ್ರಕ್ಕೆ ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದಾಗಿ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತೊಂದರೆ ಅನುಭವಿಸುವಂತಾಗಿದೆ.

ವಿಧವಾ ಪಿಂಚಣಿ, ಅಂಗವಿಕಲ ಮಾಸಾಶನ, ವಯಸ್ಕರ ಪಿಂಚಣಿ, ಜನನ– ಮರಣ ಪ್ರಮಾಣ ಪತ್ರ ಪಡೆಯಲು ಬೆಳಿಗ್ಗೆ 8ರಿಂದಲೇ ಕೇಂದ್ರದ ಮುಂದೆ ಜನ ಜಮಾಯಿಸುತ್ತಾರೆ. ಸಾಲಾಗಿ ನಿಂತು ಸುಸ್ತಾಗಿ, ಜೆಸ್ಕಾಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ತಾಲ್ಲೂಕು ಸುತ್ತಲಿನ ಹಳ್ಳಿ ಜನರು ತಮ್ಮ ದಿನನಿತ್ಯದ ಕೆಲಸಗಳನ್ನು ಬಿಟ್ಟು ಅವಶ್ಯಕ ಪ್ರಮಾಣಪತ್ರಗಳನ್ನು ಪಡೆಯಲು ಕಚೇರಿ ಮುಂದೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾಯುವಂತಾಗಿದೆ. ಬೆಳಿಗ್ಗೆ ಬಂದರೂ ಜನರ ಕೆಲಸಗಳಿಗೆ ಸ್ಪಂದನೆ ಸಿಗುವುದು ಮಧ್ಯಾಹ್ನ 12 ಗಂಟೆಯ ನಂತರವೇ. ವಿಳಂಬಕ್ಕೆ ಕಾರಣ ಕೇಳಿದರೆ ವಿದ್ಯುತ್ ಇಲ್ಲ. ಕಚೇರಿಯಲ್ಲಿ ಬ್ಯಾಟರಿ ಸುಟ್ಟ ಹೋಗಿದೆ ಎಂದು ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

‘ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಬ್ಯಾಟರಿ ವ್ಯವಸ್ಥೆ ಮಾಡಬೇಕು. ಕಚೇರಿಗೆ ಬರುವ ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗು ವುದು’ ಎಂದು ಕನ್ನಡ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ವಿವೇಕ ಚಳಕಾಪೂರೆ ಎಚ್ಚರಿಕೆ ನೀಡಿದ್ದಾರೆ.

‘ಹುಲಸೂರ ತಾಲ್ಲೂಕು ಕೇಂದ್ರ ನಿರಂತರ ಜ್ಯೋತಿ ಯೋಜನೆಗೆ ಆಯ್ಕೆ ಆಗಿದೆ. ಆದರೂ ದಿನದಲ್ಲಿ 8–10 ಸಲ ವಿದ್ಯುತ್ ಕಡಿತವಾಗುವುದು ಇಲ್ಲಿ ಸಾಮಾನ್ಯ. ಈ ಕುರಿತು ಜೆಸ್ಕಾಂ ಅಧಿಕಾರಿಗಳನ್ನು ಜನ ವಿಚಾರಿಸಿದರೆ ತಂತಿ ಸುಧಾರಣೆ, ಕಂಬ ನೆಡುವ ಇಲ್ಲವೇ ಸಿಬ್ಬಂದಿ ಕೊರತೆ ನೆಪ ಹೇಳುತ್ತಾರೆ’ ಎಂದು ಅವರು ಅಸಮಾಧಾನ್ಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.