
ಕಮಲನಗರ: ತಾಲ್ಲೂಕಿನ ಸಾವಳಿ ಗ್ರಾಮದ ಬಳಿ ಜ. 24 ರಂದು ಬೈಕ್‍ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮಂಗಳವಾರ ಸಂಜೆ ಸಾವನ್ನಪ್ಪಿದರು.
ಬಸನಾಳ ಗ್ರಾಮದ ಭಾನುದಾಸ ಮನ್ಮಥಪ್ಪ ಕಾರಬಾರಿ(68) ಮೃತಪಟ್ಟವರು
ಜ. 24 ರಂದು ಸಂಜೆ 7 ಗಂಟೆ ಸುಮಾರಿಗೆ ಬಸನಾಳ ಗ್ರಾಮದಿಂದ ರಾಜಕುಮಾರ ಸಂಗಶೆಟ್ಟಿ ಎಂಬುವವರ ದ್ವಿಚಕ್ರ ವಾಹನದ ಮೇಲೆ ಹಿಂಬದಿ ಕುಳಿತು ಹೊಳಸಮುದ್ರ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಭಾನುದಾಸ ಅವರನ್ನು ಬೀದರ್‌ನ ಗುರುನಾಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಲಾತೂರ ನಗರದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಜ. 27 ರಂದು ಸಂಜೆ ಮೃತಪಟ್ಟಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ
ಈ ಕುರಿತು ಮೃತರ ಸಹೋದರ ರವಿ ಕಾರಬಾರಿ ನೀಡಿದ ದೂರಿನನ್ವಯ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.