ADVERTISEMENT

ಪಿಒಪಿ ಗಣೇಶ ವಿಗ್ರಹ ವಶ: ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:59 IST
Last Updated 1 ಸೆಪ್ಟೆಂಬರ್ 2019, 19:59 IST
ಬೀದರ್‌ನಲ್ಲಿ ಭಾನುವಾರ ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ನಿಷೇಧದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಮೂರ್ತಿಗಳನ್ನು ವಶಪಡಿಸಿಕೊಂಡರು
ಬೀದರ್‌ನಲ್ಲಿ ಭಾನುವಾರ ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ನಿಷೇಧದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಮೂರ್ತಿಗಳನ್ನು ವಶಪಡಿಸಿಕೊಂಡರು   

ಬೀದರ್: ಪಿಒಪಿ ಗಣೇಶನ ವಿಗ್ರಹಗಳನ್ನು ಮಾರಾಟ ಮಾಡಬಾರದು ಎಂಬ ಜಿಲ್ಲಾಧಿಕಾರಿ ಆದೇಶದಂತೆ ಭಾನುವಾರ ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರು ಗಣೇಶನ ವಿಗ್ರಹಗಳನ್ನು ಪಡಿಸಿಕೊಳ್ಳಲು ಮುಂದಾದರು. ಆದರೆ ಸಾರ್ವಜನಿಕರ ಆಕ್ರೋಶ ಹೆಚ್ಚಾದ ಹಿನ್ನಲೆಯಲ್ಲಿ ಕೈಬಿಡಲಾಯಿತು.

ನಗರದ ಮುಖ್ಯ ರಸ್ತೆಯಲ್ಲಿ ಮಾರಾಟ ಮಾಡುತ್ತಿರುವ ಪಿಒಪಿ ಗಣೇಶ ವಿಗ್ರಹಗಳನ್ನು ಪಡಿಸಿಕೊಂಡಿದ್ದಾರೆ. ನಂತರ ಮೋಹನ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಿರುವ ವಿಗ್ರಹಗಳನ್ನು ವಶಪಡಿಸಿಕೊಳ್ಳಲು ಮುಂದಾದಾಗ ಅಲ್ಲಿನ ವ್ಯಾಪಾರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಡಳಿತ ಗಣೇಶನ ಮೂರ್ತಿಗಳನ್ನು ತಯಾರಿಸುವ ಮುನ್ನವೇ ಆದೇಶ ಹೊರಡಿಸಬೇಕಿತ್ತು.ಆದರೆ ಇದೀಗ ಹಬ್ಬದ ದಿನದಂದು ಖರೀದಿಸಿದ ಮೂರ್ತಿಗಳು ವಶಪಡಿಸಿಕೊಳ್ಳುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ ಪ್ರತಿಭಟನೆಗೆ ಮುಂದಾದರು.

ADVERTISEMENT

ಈ ವರ್ಷ ಆದೇಶ ಸಡಿಲಿಕೆ: ನಗರಸಭೆ ಆಯುಕ್ತ ಬಿ.ಬಸಪ್ಪ, ಗಣೇಶ ಮೂರ್ತಿಯ ವ್ಯಾಪಾರಸ್ಥರು ಈ ವರ್ಷ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.ಆ ದಿಸೆಯಲ್ಲಿ ವಶಪಡಿಸಿಕೊಂಡ ಗಣೇಶನ ಮೂರ್ತಿಗಳು ವ್ಯಾಪಾರಸ್ಥರಿಗೆ ಮರಳಿ ಕೊಡಲಾಗಿದೆ. ಅದರಂತೆ ವ್ಯಾಪಾರಸ್ಥರು ಮುಂದಿನ ವರ್ಷ ಪಿಒಪಿ ಗಣೇಶನ ವಿಗ್ರಹ ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.