ADVERTISEMENT

ಬೀದರ್: ಶಾಸಕ ಪ್ರಭು ಚವಾಣ್ ವಾಟ್ಸಪ್‌ಗೆ ಅಶ್ಲೀಲ ವಿಡಿಯೊ ರವಾನಿಸಿ ಹಣಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 9:59 IST
Last Updated 10 ಸೆಪ್ಟೆಂಬರ್ 2025, 9:59 IST
   

ಔರಾದ್ (ಬೀದರ್ ಜಿಲ್ಲೆ): ಕ್ಷೇತ್ರದ ಶಾಸಕ ಪ್ರಭು ಚವಾಣ್ ಅವರ ವಾಟ್ಸಪ್‌ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಅಶ್ಲೀಲ ಚಿತ್ರ ಹಾಗೂ ವಿಡಿಯೊ ಕಳುಹಿಸಿ ₹30 ಸಾವಿರ ಬೇಡಿಕೆ ಇಟ್ಟಿದ್ದಾನೆ.

ಹಣ ಕೊಡದೆ ಇದ್ದರೆ ಅಶ್ಲೀಲ್ ವಿಡಿಯೊ ಶೇರ್ ಮಾಡುವೆ ಎಂದು ಅಪರಿಚಿತ ವ್ಯಕ್ತಿ ಶಾಸಕರಿಗೆ ಬೆದರಿಕೆ ಹಾಕಿರುವ ಪ್ರಕರಣ ತಾಲ್ಲೂಕಿನ ಹೊಕ್ರಾಣ ಪೊಲೀಸ್ ಠಾಣೆಯಲ್ಲಿ ಸೆ. 8ರಂದು ದಾಖಲಾಗಿದೆ. ಶಾಸಕರ ಸಂಬಂಧಿ ಮುರಳಿಧರ ಪ್ರಕಾಶ ಪವಾರ್ ಎಂಬುವರು ನೀಡಿದ ದೂರಿನ ಅನ್ವಯ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.

ಅಪರಿಚಿತ ವ್ಯಕ್ತಿ ಶಾಸಕರ ವಾಟ್ಸಪ್‌ಗೆ ಸಂದೇಶ ಕಳುಹಿಸಿ ಸಾಹೇಬ್ರೆ ನನ್ನ ಮೇಲೆ ಭರವಸೆ ಇಟ್ಟು ನನಗೆ ₹30 ಸಾವಿರ ಹಣ ಹಾಕಿ ಸಹಾಯ ಮಾಡಿ. ಇಲ್ಲದೆ ಇದ್ದರೆ ಯೂಟ್ಯೂಬ್‌ನಲ್ಲಿ ನಿಮ್ಮ ವಿಡಿಯೊ ಶೇರ್ ಮಾಡುವೆ ಎಂದಿದ್ದಾನೆ.

ADVERTISEMENT

ಸೆ. 7ರಂದು ರಾತ್ರಿ ತಂತ್ರಜ್ಞಾನದ ಸಹಾಯದಿಂದ ಹುಡುಗಿಯೊಬ್ಬಳ ಜತೆ ಶಾಸಕರಿರುವ ವಿಡಿಯೊ ಕಳುಹಿಸಲಾಗಿದೆ. ಶಾಸಕರು ಹಾಗೂ ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರವೂ ಕಳುಹಿಸಲಾಗಿದೆ. ಶಾಸಕರ ಹೆಸರು ಕೆಡಿಸಿ ಅವಮಾನ ಮಾಡುವ ಈ ಅಪರಿಚಿತ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.