ADVERTISEMENT

ಎನ್‌ಸಿಸಿ ಕೆಡೆಟ್‌: ಪ್ರಾಪ್ತಿ ಅರಳಿಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 15:50 IST
Last Updated 26 ಸೆಪ್ಟೆಂಬರ್ 2021, 15:50 IST
ಪ್ರಾಪ್ತಿ ಅರಳಿ
ಪ್ರಾಪ್ತಿ ಅರಳಿ   

ಬೀದರ್: ಎನ್‌ಸಿಸಿ ಕೆಡೆಟ್‌ಗಳ ರಾಷ್ಟ್ರಮಟ್ಟದ ‘ಏಕ್ ಭಾರತ್‌ ಶ್ರೇಷ್ಠ ಭಾರತ್‌’ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಇಲ್ಲಿಯ ಜ್ಞಾನ ಸುಧಾ ಪದವಿ‌ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಾಪ್ತಿ ಅರಳಿ ವಿವಿಧ ಚಟುವಟಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿ ಗೆದ್ದುಕೊಂಡಿದ್ದಾಳೆ.

ದೆಹಲಿಯಿಂದ ವರ್ಚುವೆಲ್‌ ಮೂಲಕ ಒಂದು ವಾರ ನಡೆದ ಶಿಬಿರದಲ್ಲಿ ವಿವಿಧ ರಾಜ್ಯಗಳ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಾಪ್ತಿ ಅರಳಿ ವಿಜೇತರೆಂದು ಘೋಷಣೆ ಮಾಡಲಾಗಿದೆ.

ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ ಹಾಗೂ ಶಿಕ್ಷಕಿ ಭಾನುಪ್ರಿಯಾ ಅರಳಿ ದಂಪತಿ ಪುತ್ರಿಯಾದ ಪ್ರಾಪ್ತಿ, ಕಳೆದ ವರ್ಷವೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ರೇಂಜರ್‌ ಆಗಿ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.