ADVERTISEMENT

ಬೀದರ್‌ | ವಿಶ್ವಧರ್ಮ ಪ್ರವಚನ ಭಿತ್ತಿಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 5:44 IST
Last Updated 25 ಜುಲೈ 2025, 5:44 IST
ಚನ್ನಬಸವಾನಂದ ಸ್ವಾಮೀಜಿ, ನಾಗಭೂಷಣ ಕಮಠಾಣೆ ಮತ್ತಿತರರು ‘ವಿಶ್ವಧರ್ಮ ಪ್ರವಚನ’ದ ಕರಪತ್ರ ಹಾಗೂ ಭಿತ್ತಿಪತ್ರ ಬಿಡುಗಡೆಗೊಳಿಸಿದರು
ಚನ್ನಬಸವಾನಂದ ಸ್ವಾಮೀಜಿ, ನಾಗಭೂಷಣ ಕಮಠಾಣೆ ಮತ್ತಿತರರು ‘ವಿಶ್ವಧರ್ಮ ಪ್ರವಚನ’ದ ಕರಪತ್ರ ಹಾಗೂ ಭಿತ್ತಿಪತ್ರ ಬಿಡುಗಡೆಗೊಳಿಸಿದರು   

ಬೀದರ್‌: ಶ್ರಾವಣ ಮಾಸದ ಅಂಗವಾಗಿ ಜು. 25ರಿಂದ ಒಂದು ತಿಂಗಳು ಇಲ್ಲಿನ ಗಾಂಧಿ ನಗರದ ಬಸವೇಶ್ವರ ಮಂದಿರದ ಆವರಣದಲ್ಲಿ ನಡೆಯಲಿರುವ ‘ವಿಶ್ವಧರ್ಮ ಪ್ರವಚನ’ದ ಕರಪತ್ರ ಹಾಗೂ ಭಿತ್ತಿಪತ್ರ ಬಿಡುಗಡೆ ಸಮಾರಂಭ ನಗರದಲ್ಲಿ ಗುರುವಾರ ಜರುಗಿತು. 

ಬೀದರ್‌ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಮಾತನಾಡಿ, ನಿತ್ಯ ಸಂಜೆ 6.30ರಿಂದ 8.30ರ ವರೆಗೆ ಪ್ರವಚನ ನಡೆಯಲಿದೆ. ವಿಶ್ವಧರ್ಮ ಪ್ರವಚನ ಸಮಿತಿ ಹಾಗೂ ಬಸವೇಶ್ವರ ಮಂದಿರ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಜರುಗಲಿದೆ. ಸದ್ಭಕ್ತರು ಇದರ ಪ್ರಯೋಜನ ಪಡೆಯಬೇಕು ಎಂದರು.

ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ನಿತ್ಯ ಪ್ರಸಾದ ವ್ಯವಸ್ಥೆ ಇರಲಿದೆ. ಗಾಂಧಿನಗರ, ಮೈಲೂರ, ಶಾಸ್ತ್ರಿ ನಗರ, ಸಿಎಂಸಿ ಕಾಲೊನಿ, ವಿದ್ಯಾನಗರ, ಅಲ್ಲಮಪ್ರಭು ನಗರ ಹಾಗೂ ರಾಂಪೂರೆ ಕಾಲೊನಿಯ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಪ್ರಮುಖರಾದ ಕಮಲಾಕರ ಪಾಟೀಲ, ಮಲ್ಲಿಕಾರ್ಜುನ ದೇಶಮುಖ, ವಿಶ್ವನಾಥ ಪಾಟೀಲ, ಚಂದ್ರಶೇಖರ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ರವಿಕಾಂತ ಬಿರಾದಾರ, ಮಲ್ಲಿಕಾರ್ಜುನ ಜೈಲರ್, ಓಂಪ್ರಕಾಶ ರೊಟ್ಟೆ, ಶಂಕರಗೌಡ ಪಾಟೀಲ, ಬಸವ ದರ್ಶನ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.