ADVERTISEMENT

ಹುಮನಾಬಾದ್: ಕಾರಾಗೃಹದ ಚಾವಣಿಯಿಂದ ಜಿಗಿದು ವಿಚಾರಣಾಧೀನ ಕೈದಿ ಸಾವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:00 IST
Last Updated 17 ನವೆಂಬರ್ 2025, 6:00 IST
ಹುಮನಾಬಾದ್ ಪಟ್ಟಣದ ಕಾರಾಗೃಹಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ಸಿಪಿಐ ಸಂತೋಷ್ ಸೇರಿದಂತೆ ಇತರರು ಇದ್ದರು.
ಹುಮನಾಬಾದ್ ಪಟ್ಟಣದ ಕಾರಾಗೃಹಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ಸಿಪಿಐ ಸಂತೋಷ್ ಸೇರಿದಂತೆ ಇತರರು ಇದ್ದರು.   

ಹುಮನಾಬಾದ್: ವಿಚಾರಣಾ ಕೈದಿಯೊಬ್ಬರು ಪಟ್ಟಣದ ಶನಿವಾರ ಸಂಜೆ ಉಪ ಕಾರಾಗೃಹ ಕಟ್ಟಡದ ಚಾವಣೆಯಿಂದ ಜಿಗಿದು ಮೃತಪಟ್ಟಿದ್ದಾರೆ.

ಮೃತರನ್ನು ಖಂಡಪ್ಪ (45) ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ 4.30ರ ಸುಮಾರಿಗೆ ಕಾರಾಗೃಹದ ಆವರಣದಲ್ಲಿ ಕೈದಿಗಳನ್ನು ವಾಯು ವಿಹಾರಕ್ಕೆ ಬಿಟ್ಟಾಗ ಖಂಡಪ್ಪ ಮರದ ಸಹಾಯದಿಂದ ಚಾವಣಿ ಹತ್ತಿದ್ದ. ಇದನ್ನು ಗಮನಿಸಿದ ಕಾರಾಗೃಹದ ಸಿಬ್ಬಂದಿ ತಕ್ಷಣ ಕೇಳಗೆ ಬರುವಂತೆ ಹೇಳಿದಾಗ ಖಂಡಪ್ಪ ಮೇಲಿಂದ ಜಿಗಿದಿದ್ದಾನೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ತೀವ್ರ ರಕ್ತ ಸ್ರಾವವಾಗಿತ್ತು. ಗಾಯಗೊಂಡ ಖಂಡಪ್ಪನನ್ನು ಸಿಬ್ಬಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು.‌ ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ರಸ್ತೆ ಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ADVERTISEMENT

ಈ ಕುರಿತು ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಿಪಿಐ ಸಂತೋಷ್ ಎಲ್.ಟಿ, ಸಿಬ್ಬಂದಿ ನಾಗೇಶ ಬಳತೆ, ರೇವಣಸಿದ್ದ, ಮಂಜುನಾಥ ಸೇರಿದಂತೆ ಇತರರು ಇದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.