ADVERTISEMENT

ಬೀದರ್ | ಐತಿಹಾಸಿಕ ಸ್ಮಾರಕ ರಕ್ಷಿಸಿ: ಬಾಗಾ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 13:37 IST
Last Updated 25 ನವೆಂಬರ್ 2021, 13:37 IST
ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಪರಂಪರೆ ಸಪ್ತಾಹ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸುಲೆಪೇಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಬಸವರಾಜ ರಾಗಾ ಉದ್ಘಾಟಿಸಿದರು. ರಾಜಪ್ಪ ಬಬಚೇಡಿ, ಧನರಾಜ ತುಡಮೆ, ಭಾಗ್ಯವತಿ ಇದ್ದರು
ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಪರಂಪರೆ ಸಪ್ತಾಹ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸುಲೆಪೇಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಬಸವರಾಜ ರಾಗಾ ಉದ್ಘಾಟಿಸಿದರು. ರಾಜಪ್ಪ ಬಬಚೇಡಿ, ಧನರಾಜ ತುಡಮೆ, ಭಾಗ್ಯವತಿ ಇದ್ದರು   

ಬೀದರ್: ಐತಿಹಾಸಿಕ ಸ್ಮಾರಕಗಳ ರಕ್ಷಣೆ ಕೆಲಸ ಆಗಬೇಕು ಎಂದು ಸುಲೆಪೇಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಾಗಾ ನುಡಿದರು.

ಇಲ್ಲಿಯ ಜನವಾಡ ರಸ್ತೆಯಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಪರಂಪರೆ ಸಪ್ತಾಹ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ಗ್ರಾಮಗಳಲ್ಲೂ ಸ್ಮಾರಕಗಳು ಇವೆ. ಅವುಗಳ ಇತಿಹಾಸದ ಸಂಶೋಧನೆ ಅಗತ್ಯವಾಗಿದೆ ಎಂದು ಹೇಳಿದರು.

ADVERTISEMENT

ಉತ್ಸವಗಳು ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನೆರವಾಗುತ್ತವೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿಯ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಇಂದುಮತಿ ಪಾಟೀಲ ತಿಳಿಸಿದರು.

ಭಾರತದ ಪರಂಪರೆಗೆ ಶರಣರ ನಾಡು ಬೀದರ್ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.

ಭಾರತವು ಶ್ರೀಮಂತ ಪರಂಪರೆ, ಸಂಸ್ಕೃತಿಯನ್ನು ಹೊಂದಿದೆ ಎಂದು ಪ್ರಾಚಾರ್ಯ ರಾಜಪ್ಪ ಬಬಚೇಡಿ ಹೇಳಿದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಭಾಗ್ಯವತಿ ಮಾತನಾಡಿದರು.

ಧನರಾಜ ತುಡಮೆ, ಪ್ರೊ. ಮನೋಜಕುಮಾರ, ಪಾರ್ವತಿ ಮೇತ್ರೆ, ಭೀಮಷಾ, ಮುನ್ನೆಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.