ADVERTISEMENT

ಜೀವ ವೈವಿಧ್ಯ ರಕ್ಷಣೆ ಎಲ್ಲರ ಹೊಣೆ

ಪರಿಸರೋತ್ಸವ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಪೂಜಾ ಸೂರ್ಯವಂಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 13:44 IST
Last Updated 18 ಸೆಪ್ಟೆಂಬರ್ 2022, 13:44 IST
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ನಡೆದ ಪರಿಸರೋತ್ಸವಕ್ಕೆ ತಹಶೀಲ್ದಾರ್ ಡಾ.ಪ್ರದೀಪಕುಮಾರ್ ಹಿರೇಮಠ ಉದ್ಘಾಟಿಸಿದರು
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ನಡೆದ ಪರಿಸರೋತ್ಸವಕ್ಕೆ ತಹಶೀಲ್ದಾರ್ ಡಾ.ಪ್ರದೀಪಕುಮಾರ್ ಹಿರೇಮಠ ಉದ್ಘಾಟಿಸಿದರು   

ಹುಮನಾಬಾದ್: ‘ಜೀವ ವೈವಿಧ್ಯ ರಕ್ಷಣೆ ಎಲ್ಲರ ಹೊಣೆ’ ಎಂದು ಪ್ರಾಧ್ಯಾಪಕಿ ಪೂಜಾ ಸೂರ್ಯವಂಶಿ ಹೇಳಿದರು.

ವೇದಮೂರ್ತಿ ಗದಗಯ್ಯಾ ಕಾವಡಿ ಮಠರವರ 9ನೇ ಪುಣ್ಯಸ್ಮರಣೆ ಅಂಗವಾಗಿ ಬೀದರ್‌ನ ಪರಿಸರ ವಾಹಿನಿ ಸಂಸ್ಥೆ ವತಿಯಿಂದ ತಾಲ್ಲೂಕಿನ ಹುಡಗಿ ಗ್ರಾಮದ ಹನುಮಾನ ಮಂದಿರದಲ್ಲಿ ನಡೆದ ಪರಿಸರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ವಿಶೇಷ ಆಸಕ್ತಿ ವಹಿಸಿ ಗಿಡ–ಮರಗಳನ್ನು ಬೆಳೆಸಿದರೆ ಮುಂದಿನ ದಿನಗಳಲ್ಲಿ ಶುದ್ಧ ಗಾಳಿ ಪಡೆಯಲು ಸಾಧ್ಯ ಎಂದರು.

ADVERTISEMENT

ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ, ಸಿಪಿಐ ಶರಣಬಸಪ್ಪ ಕೊಡ್ಲಾ, ಭಾಲ್ಕಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹುಡಗಿ ಮಠದ ವಿರೂಪಾಕ್ಷ ಶಿವಾಚಾರ್ಯರು ಹಾಗೂ ಚನ್ನಮಲ್ಲ ದೇವರು, ಸಿಂಧನಕೇರ ವಿರಕ್ತಮಠದ ಹೊನ್ನಲಿಂಗೇಶ್ವರ ಸ್ವಾಮಿಗಳ ಸಾನ್ನಿಧ್ಯ ವಹಿಸಿದ್ದರು.

ಡಿ.ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಗಂಧರ್ವ ಸೇನಾ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪರಿಸರೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಪರಿಸರವಾದಿ ಶೈಲೇಂದ್ರ ಕಾವಡಿ, ಮಾತೋಶ್ರೀ ಸರಸ್ವತಿ ಕಾವಡಿ ಮಠ, ಮುರಗಯ್ಯಾ ಕಾವಡಿ ಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಮಾಶೆಟ್ಟಿ, ಪಿ.ಡಿ.ಒ ಮಲ್ಲಪ್ಪಾ ಸನ್ನದ, ಸದಾಶಿವಯ್ಯಾ ವಿಭೂತಿ, ಗುರುನಾಥ ಹುಗಾರ, ಸಿದ್ದಯ್ಯಾ ಕಾವಡಿ ಮಠ ಹಾಗೂ ವೀರಯ್ಯಾ ಕಾವಡಿ ಮಠ ಇದ್ದರು.

ದಯಾನಂದ ಸಿಂಧನಕೇರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.