ADVERTISEMENT

ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 4:25 IST
Last Updated 15 ಸೆಪ್ಟೆಂಬರ್ 2021, 4:25 IST
ಭಾಲ್ಕಿಯ ಸ್ಟೇಟ್‌ ಬ್ಯಾಂಕ್‌ ಮುಂಭಾಗದಲ್ಲಿ ಮಂಗಳವಾರ ಹಿಂದಿ ಹೇರಿಕೆ ವಿರೋಧಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಭಾಲ್ಕಿಯ ಸ್ಟೇಟ್‌ ಬ್ಯಾಂಕ್‌ ಮುಂಭಾಗದಲ್ಲಿ ಮಂಗಳವಾರ ಹಿಂದಿ ಹೇರಿಕೆ ವಿರೋಧಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಭಾಲ್ಕಿ: ಇಲ್ಲಿಯ ಸ್ಟೇಟ್‌ ಬ್ಯಾಂಕ್‌ ಮುಂಭಾಗದಲ್ಲಿ ಮಂಗಳವಾರ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ವಿರೋಧಿಸಿ, ಕನ್ನಡದಲ್ಲಿ ಎಲ್ಲ ರೀತಿಯ ಸೇವೆಯನ್ನು ಕೊಡಲು ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ಪ್ರಮುಖರು, ಸಂವಿಧಾನದ ಆಶಯದಂತೆ ಎಲ್ಲ ಜನರಿಗೆ, ಎಲ್ಲ ಭಾಷೆಗೆ ಸಮಾನವಾಗಿ ಬೆಳೆಯುವ, ಬದುಕುವ ಮೂಲಭೂತ ಹಕ್ಕು ಇದೆ. ಉತ್ತರ ಭಾರತದ ಒಂದೆರಡು ರಾಜ್ಯದಲ್ಲಿ ಮಾತನಾಡುವ ಭಾಷೆಯನ್ನೇ ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಹುನ್ನಾರ ಇದಾಗಿದೆ. ಕನ್ನಡಿಗರನ್ನು ಉದ್ಯೋಗದಿಂದ ವಂಚಿತರನ್ನಾಗಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.

ಬ್ಯಾಂಕ್‌ನ ಎಲ್ಲ ಸೇವೆಗಳಿಗೆ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು, ಕರ್ನಾಟಕದಲ್ಲಿ ಕನ್ನಡಿಗರನ್ನು ಬ್ಯಾಂಕ್ ಉದ್ಯೋಗಿಗಳನ್ನಾಗಿ ನೇಮಿಸಬೇಕು ಎಂದು ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಜಿ. ಪಾಟೀಲ, ಪ್ರಮುಖರಾದ ಅಭಿಜೀತ ಬಿರಾದಾರ, ಅಜಯ, ರಮೇಶ ಚಿದ್ರಿ, ಅನಿಲ್‌ ದಾಡಗೆ, ದಶರಥ ಢೋಳೆ, ಸಾಗರ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.