ADVERTISEMENT

ರೈಲು ಸಂಚಾರ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 3:59 IST
Last Updated 31 ಮೇ 2022, 3:59 IST
ಬೀದರ್- ಯಶವಂತಪುರ ವಯಾ ಕಲಬುರಗಿ ರೈಲು ಸಂಚಾರ ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಯ ಕಾರ್ಯಕರ್ತರು ಬೀದರ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು
ಬೀದರ್- ಯಶವಂತಪುರ ವಯಾ ಕಲಬುರಗಿ ರೈಲು ಸಂಚಾರ ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಯ ಕಾರ್ಯಕರ್ತರು ಬೀದರ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಬೀದರ್: ತಾತ್ಕಾಲಿಕವಾಗಿ ತಡೆ ಹಿಡಿಯಲಾದ ಬೀದರ್-ಯಶವಂತಪುರ ವಯಾ ಕಲಬುರಗಿ ರೈಲು ಸಂಚಾರ ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಯ ಜಿಲ್ಲಾ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ADVERTISEMENT

ಕೆಲ ಜನಪ್ರತಿನಿಧಿಗಳ ವಿರೋಧದ ಕಾರಣ ಬೀದರ್-ಯಶವಂತಪುರ ವಯಾ ಕಲಬುರಗಿ ರೈಲು ಸಂಚಾರ ತಡೆ ಹಿಡಿಯಲಾಗಿದೆ. ಸದ್ಯದ
ಮಾರ್ಗದಲ್ಲಿ 3 ಗಂಟೆ ಹೆಚ್ಚು ಅವಧಿ ಹಿಡಿಯುತ್ತಿದೆ. ಕಾರಣ, ಪ್ರಯಾಣಿಕರ ಹಿತದೃಷ್ಟಿಯಿಂದ ಕಲಬುರಗಿ ಮಾರ್ಗವಾಗಿ ರೈಲು ಸಂಚಾರ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರೆ, ವಿಜಯಕುಮಾರ ಐಹೊಳೆ, ಜೈಪ್ರಕಾಶ ಅಷ್ಟೂರೆ, ಜೈಭೀಮ ಕಾಳೇಕರ್, ಬಸವರಾಜ ಭಾವಿದೊಡ್ಡಿ, ಆಕಾಶ್ ಸಿಂಧೆ, ಸಂಗಮೇಶ ಬಾವಿದೊಡ್ಡಿ, ತುಕಾರಾಮ ಹಸನಮುಖಿ, ಮಹೇಂದ್ರಕುಮಾರ ಹೊಸಮನಿ, ಕುಪೇಂದ್ರ ಶರ್ಮಾ, ಖಾಜಾ ಮೈನೊದ್ದಿನ್, ಅನಿಲ್ ಕಾಂಬಳೆ, ಆಕಾಶ ಕಾಂಬಳೆ, ರತಿಕಾಂತ, ನಾಗೇಶ ಮೇತ್ರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.