ಬೀದರ್: ಮಾರ್ಚ್ 3ರಿಂದ 6ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಂಗವಾಗಿ ಪ್ರಚಾರ ವಾಹನ ರ್‍ಯಾಲಿಗೆ ನಗರದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಎದುರು ಡಿಎಚ್‌ಒ ಡಾ.ಧ್ಯಾನೇಶ್ವರ ನೀರಗುಡಿ ಹಸಿರು ನಿಶಾನೆ ತೋರಿದರು.
ಈ ಪಲ್ಸ್ ಪೋಲಿಯೋ ಝಿಂಗಲ್ಸ್ ಮೂಲಕ ಒಟ್ಟು 15 ವಾಹನಗಳ ರ‍್ಯಾಲಿಯು ಡಿಎಚ್‌ಒ ಕಚೇರಿಯಿಂದ ಆರಂಭವಾಗಿ ಚೌಬಾರ, ಮಂಗಲಪೇಟ್, ಅಬ್ದುಲ್ ಫೈಜ್ ದರ್ಗಾ, ಲಾಡಗೇರಿ, ಕುಂಬರವಾಡ, ಸಿದ್ಧಾರೂಢ ಮಠ, ಮೈಲೂರ, ಚಿದ್ರಿ, ಆದರ್ಶ ಕಾಲೊನಿ, ನೌಬಾದ್ ಮಾರ್ಗವಾಗಿ ಪುನಃ ಡಿಎಚ್‌ಒ ಕಚೇರಿಯಲ್ಲಿ ಕೊನೆಗೊಂಡಿತು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಶಿವಶಂಕರ ಭತಮುರ್ಗೆ, ಡಿಎಂಒ ಡಾ. ರಾಜಶೇಖರ ಪಾಟೀಲ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಡಿಎಚ್‌ಇಒ ಸಂಗಪ್ಪ ಕಾಂಬಳೆ, ಡಿಪಿಎಂ ಉಮೇಶ ಬಿರಾದಾರ, ಐಎಫ್‌ಎಂ ಲೋಕೇಶ ಸಲಗರ, ಡಿಪಿ ಶಿವಶಂಕರ ಬೇಮಳಗಿ, ಅಶೋಕ, ದೇವಿದಾಸ, ಗಂಗಾಧರ, ರೋಟರಿ ಕ್ಲಬ್ ಪದಾಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.