ADVERTISEMENT

ಎರಡನೇ ದಿನವೂ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:42 IST
Last Updated 14 ಮೇ 2025, 14:42 IST
<div class="paragraphs"><p>ಒಡಿಶಾದಲ್ಲಿ ಮಳೆ</p></div>

ಒಡಿಶಾದಲ್ಲಿ ಮಳೆ

   

ಸಾಂದರ್ಭಿಕ ಚಿತ್ರ

ಬೀದರ್‌: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಎರಡನೇ ದಿನವೂ ಉತ್ತಮ ಮಳೆಯಾಗಿದ್ದು, ತಾಪಮಾನ ಸಾಕಷ್ಟು ತಗ್ಗಿದೆ.

ADVERTISEMENT

ಬಿಸಿಲಿನಿಂದ ಕಂಗೆಟ್ಟಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸತತ ಮಳೆಗೆ ಬಿಸಿಲಿನ ಝಳ ಕಡಿಮೆಯಾಗಿದೆ. ತಂಗಾಳಿ ಬೀಸುತ್ತಿದೆ.

ಬೀದರ್‌ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬುಧವಾರ ಸಂಜೆ ಗಂಟೆಗೂ ಹೆಚ್ಚು ಸಮಯ ಜೋರು ಮಳೆಯಾಯಿತು. ಗುಡುಗು ಸಹಿತ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.

ತಾಲ್ಲೂಕಿನ ಜನವಾಡ, ಹೊನ್ನಿಕೇರಿ, ಬೆಳ್ಳೂರಾ, ಕಮಠಾಣ, ಶಹಾಪುರ, ಚೊಂಡಿ, ಅಲಿಯಂಬರ್‌ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಮಂಗಳವಾರವೂ ಉತ್ತಮ ವರ್ಷಧಾರೆಯಾಗಿತ್ತು. ಸತತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಜನರಿಗೆ ಸೆಕೆಯಿಂದ ಮುಕ್ತಿ ದೊರೆತಿದೆ.

ಜಿಲ್ಲೆಯ ಬಸವಕಲ್ಯಾಣ, ಕಮಲನಗರ, ಹುಲಸೂರ ಹಾಗೂ ಔರಾದ್‌ ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಅರ್ಧಗಂಟೆಗೂ ಹೆಚ್ಚು ಸಮಯ ಬಿರುಸಿನ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.