ADVERTISEMENT

ಬಸವಕಲ್ಯಾಣ | ಮಳೆಯಿಂದ ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 5:41 IST
Last Updated 25 ಜುಲೈ 2025, 5:41 IST
ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ರಸ್ತೆಯಲ್ಲಿನ ಮಳೆ ನೀರಿನಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ನಿಂತಿರುವುದು
ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ರಸ್ತೆಯಲ್ಲಿನ ಮಳೆ ನೀರಿನಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ನಿಂತಿರುವುದು   

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು, ವಾಹನ ಸಂಚಾರಕ್ಕೆ ತೊಂದರೆಯಾಯಿತು.

ನಗರದ ಧರ್ಮಪ್ರಕಾಶ ಓಣಿ, ಕೈಕಾಡಿ ಗಲ್ಲಿಯಲ್ಲಿ ಸುತ್ತಲಿನಲ್ಲಿ ಮಳೆ ನೀರು ಆವರಿಸಿದ್ದರಿಂದ ಐದು ಮನೆಗಳ ಗೋಡೆಗಳಿಗೆ ಹಾನಿಯಾಗಿದೆ. ಗುರುಭವನದ ಸುತ್ತಲಿನಲ್ಲಿನ ಅಂಗಡಿಗಳಿಗೆ ಮಳೆ ನೀರು ನುಗ್ಗಿತ್ತು. ಬಸವಕಲ್ಯಾಣದಲ್ಲಿ 38.6 ಮಿ.ಮೀ ಮಳೆಯಾಗಿದೆ. ಕೊಹಿನೂರ 32 ಮಿ.ಮೀ, ರಾಜೇಶ್ವರ 28 ಮಿ.ಮೀ, ಮಂಠಾಳ 90 ಮಿ.ಮೀ, ಮುಡಬಿ 34.3 ಮಿ.ಮೀ ಹುಲಸೂರ-14.3 ಮಿ.ಮೀ ಮಳೆಯಾಗಿದೆ.

ಮಾಜಿ ಶಾಸಕ ಖೂಬಾ ಅಸಮಾಧಾನ: ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಶುಕ್ರವಾರ ಮಧ್ಯರಾತ್ರಿ ಸುರಿದ ಮಳೆಗೆ ನಗರದಲ್ಲಿ ಸಂಭವಿಸಿದ ಹಾನಿ ಕುರಿತು ಶೀಘ್ರ ಸ್ಥಳಕ್ಕೆ ಧಾವಿಸಿ, ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕಿದರು.

ADVERTISEMENT

ಖೂಬಾ ಅವರು ಮಳೆಯಲ್ಲಿಯೇ ಕಾರಿನಲ್ಲಿ ಕುಳಿತು ಸಸ್ತಾಪುರ ಬಂಗ್ಲಾದ ರಾಷ್ಟ್ರೀಯ ಹೆದ್ದಾರಿಯಿಂದ ಆರಂಭಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ್ದಾರೆ. ನೀರು ಸಂಗ್ರಹಗೊಂಡು ರಸ್ತೆಗಳಲ್ಲಿ ತಗ್ಗುಗುಂಡಿ ಬಿದ್ದಿರುವ ಸ್ಥಳದಲ್ಲಿ ನಿಂತು ಅಲ್ಲಿ ಆಗಿರುವ ಹಾನಿಯನ್ನು ಕ್ಯಾಮೆರಾ ಮೂಲಕ ತೋರಿಸಿ, ಅವರೇ ವಿವರಿಸಿದ್ದಾರೆ.

ಬಂಗ್ಲಾ ರಸ್ತೆಯಲ್ಲಿ ಹಾಗೂ ಅಟೋನಗರದಲ್ಲಿ ಮಳೆಯಿಂದ ದೊಡ್ಡ ತಗ್ಗುಗಳು ಬಿದ್ದಿವೆ. ಆದರೂ ಯಾರೂ ಸ್ಪಂದಿಸಿಲ್ಲ. ಶಾಸಕರಾದಿಯಾಗಿ ಸಂಬಂಧಿತರು ಈ ಕಡೆ ಬೇಕೆಂತಲೇ ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇಲ್ಲಿನ ಶರಣ ಸ್ಮಾರಕಗಳ ಜೀರ್ಣೋದ್ಧಾರವಾದ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ರಸ್ತೆಯಲ್ಲಿನ ಮಳೆ ನೀರಿನಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.