ಹುಮನಾಬಾದ್: ತಾಲ್ಲೂಕಿನಾದ್ಯಂತ ಸುಮಾರು ಮೂರು–ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಒಟ್ಟು 42 ಮನೆಗಳ ಗೋಡೆಗಳು ಕುಸಿದಿವೆ.
ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಹಳ್ಳಿಖೇಡ ಬಿ. ಪಟ್ಟಣದಲ್ಲಿ 2 ಮನೆಗಳ ಗೋಡೆ, ಡಾಕುಳಗಿ ಮತ್ತು ಅಮೀರಬಾದ್ 4, ಸಿಂದಬಂದಗಿ ಹಾಗೂ ಅತಿವಾಳ 6, ನಿಂಬೂರ್ ಅಲ್ಲೂರು 3, ಹುಡಗಿ 1, ಮೋಳಕೇರಾ 3, ಗೋಘವಾಡಿ 1, ಹಣಕುಣಿಯಲ್ಲಿ ಒಂದು ಸೇರಿ ತಾಲ್ಲೂಕಿನ ಇನ್ನು 10 ಗ್ರಾಮಗಳಲ್ಲಿ ಮನೆಗಳ ಗೋಡೆ ಉರುಳಿವೆ. ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.