ADVERTISEMENT

ರಾವಣ ದಹನ ಕಣ್ತುಂಬಿಕೊಂಡ ಜನ

ಹುಮನಾಬಾದ್; 26 ಅಡಿ ಎತ್ತರದ ದಶಮುಖನ ಪ್ರತಿಕೃತಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 6:09 IST
Last Updated 6 ಅಕ್ಟೋಬರ್ 2022, 6:09 IST
ಹುಮನಾಬಾದ್ ಪಟ್ಟಣದಲ್ಲಿ ನಡೆದ ರಾವಣ ಪ್ರತಿಕೃತಿ ದಹನ
ಹುಮನಾಬಾದ್ ಪಟ್ಟಣದಲ್ಲಿ ನಡೆದ ರಾವಣ ಪ್ರತಿಕೃತಿ ದಹನ   

ಹುಮನಾಬಾದ್: ಇಲ್ಲಿನ ಬಾಲಾಜಿ ಮಂದಿರ ಸಮಿತಿ ವತಿಯಿಂದ ವಿಜಯದಶದಮಿ ದಿನ 26 ಅಡಿ ಎತ್ತರದ ರಾವಣ ಪ್ರತಿಕೃತಿಯನ್ನು ದಹನ ಮಾಡಲಾಯಿತು.

1965ರಲ್ಲಿ ಮೊದಲ ಬಾರಿಗೆ ಇಲ್ಲಿನ ಚಿತ್ರಕಲಾವಿದ ಕಿಶನ್ ಪೇಂಟರ್ ಅವರು ಚಿಕ್ಕದಾಗಿ ಹಾಳೆ ಮೇಲೆ ಚಿತ್ರ ಬಿಡಿಸಿ , ಕೆಲವು ವರ್ಷಗಳ ನಂತರ ದೊಡ್ಡದಾದ ಬಟ್ಟೆ ಮೇಲೆ ಚಿತ್ರಬಿಡಿಸಿ , ರಥ ಮೈದಾನದ ವರೆಗೆ ಮೆರವಣಿಗೆ ಮೂಲಕ ಕೊಂಡೊಯ್ದು ದಹಿಸುವ ಪದ್ಧತಿ ಆರಂಭ ಮಾಡಿದ್ದರು.

ಇದನ್ನೇ ಮುಂದುವರಿಸಿಕೊಂಡ ಬಂದ ಇಲ್ಲಿನ ಯುವಕರು ಬಿದಿರಿನಿಂದ ತಯಾರಿಸಿದ 26 ಅಡಿ ಎತ್ತರದ ರಾವಣ ಪ್ರತಿಕೃತಿಯನ್ನು ದಹನ ಮಾಡಿದರು. ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಜನ ಬೆಂಕಿಯಲ್ಲಿ ಸುಡುವ ಲಂಕಾಸೂರನನ್ನು ವೀಕ್ಷಿಸುತ್ತಾರೆ.

ADVERTISEMENT

ಪ್ರತಿಕೃತಿ ನಿರ್ಮಾಣಕ್ಕೆ ವಿಜಯಕುಮಾರ , ಇಂದ್ರಪ್ರಸಾದ ದುಬೆ, ಲಕ್ಷ್ಮಣರಾವ ಚವ್ಹಾಣ ಬಾಬುರಾ ವರ್ಮಾ , ಶಿವಾಜಿರಾವ , ಪ್ರೇಮಕುಮಾರ ಚಿದ್ರಿ , ಜಗನಪ್ರಸಾದ, ವೀರಣ್ಣಾ ಚಂದನೋರ್, ವೀರಣ್ಣಾ ಹೂಗಾರ , ವೀರಣ್ಣಾ ಇತರರು ಕೈ ಜೋಡಿಸುತ್ತಾರೆ.

ಮೊದಲು 5 ಅಡಿ ಎತ್ತರ ಮಾಡಲಾಗುತ್ತಿತ್ತು. ಈಗ 5 ರಿಂದ 26 ಅಡಿಗೆ ತಲುಪಿದೆ. ಬಿದಿರಿನ ಬಂಬು ಹಾಗೂ ಪೇಪರ್ ಬಳಕೆ ಮಾಡಲಾಗುತ್ತಿದ್ದು, ಭಾರ 4 ಕ್ವಿಂಟಾಲ್ ಆಗುತ್ತಿದೆ. ಆರಂಭದಲ್ಲಿ 10 ತಲೆಗಳುಳ್ಳ ರಾವಣನ ಪ್ರತಿಕೃತಿ ಸಿದ್ಧಪಡಿಸಲಾಗುತಿತ್ತು. ಮೆರವಣಿಗೆ ವೇಳೆ ಸಮಸ್ಯೆ ಆಗುತ್ತಿದ್ದರಿಂದ ದಶಮುಖನನ್ನು ಏಕಮುಖಕ್ಕೆ ಇಳಿಸಲಾಯಿತು . ಈಗ ಏಕಮುಖದ ರಾವಣನ ಪ್ರತಿಕೃತಿಯನ್ನು ನಿರ್ಮಿಸಿ ದಹನ ಮಾಡುವ ಪದ್ಧತಿ ಕಳೆದ 60ವರ್ಷಗಳ ಇತಿಹಾಸ ಹೊಂದಿದೆ.

ಪಲ್ಲಕ್ಕಿ ಉತ್ಸವ: ಹಿರೇಮಠ ಸಂಸ್ಥಾನದ ರೇಣುಕಾ ವೀರಗಂಗಾಧರ ಶಿವಾಚಾರ್ಯರ ಹಾಗೂ ಶಾಸಕ ರಾಜಶೇಖರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಇಲ್ಲಿಯ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಶ್ರೀರಾಮನ ಪಲ್ಲಕಿಯೊಂದಿಗೆ ದಶಮುಖ ರಾವಣನ ಪ್ರಕೃತಿಯೊಂದಿಗೆ ಥೇರೂ ಮೈದಾನ ತಲುಪಿತು. ಬಳಿಕ ರಾಮಲೀಲಾ ಕಾರ್ಯಕ್ರಮದ. ನಂತರ ರಾವಣ ದಹನ ಕಾರ್ಯಕ್ರಮ ಜರುಗಿತು.

‘60 ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ಧರ್ಮದ ಜನರು ಭಾಗವಹಿಸಿ ಅತ್ಯಂತ ವಿಜೃಂಭಣೆಯಿಂದ ಆರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದು ಶಾಸಕರಾಜಶೇಖರ ಪಾಟೀಲ ಹೇಳಿದರು.

‘ರಥ ಮೈದಾನದಲ್ಲಿ ನಡೆಯುವ ರಾಮಲೀಲಾ ಹಾಗೂ ರಾವಣ ಪ್ದಹನ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿ ಸಂಭ್ರಮಿಸುವುದು ವಿಶೇಷ’ ಎಂದು ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.