ADVERTISEMENT

ಜಿ.ಪಂ, ತಾ.ಪಂ ಚುನಾವಣೆಗೆ ಅಣಿಯಾಗಿ

ಬಹುಜನ ಸಮಾಜ ಪಕ್ಷದ ಸಮಾವೇಶದಲ್ಲಿ ರಾಮಜಿ ಗೌತಮ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 14:15 IST
Last Updated 5 ಅಕ್ಟೋಬರ್ 2021, 14:15 IST
ಬೀದರ್‌ನ ಪ್ರತಾಪನಗರದಲ್ಲಿ ಆಯೋಜಿಸಿದ್ದ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ರಾಮಜಿ ಗೌತಮ ಉದ್ಘಾಟಿಸಿದರು. ಸ್ವಾಮಿದಾಸ ಕೆಂಪೆನೋರ, ದತ್ತು ಸೂರ್ಯವಂಶಿ, ದಿನೇಶ ಗೌತಮ, ಸೈಯದ್ ಹುಲ್ ಹಕ್ ಬುಖಾರಿ, ಕೆ.ಬಿ. ವಾಸು, ಎಂ. ಕೃಷ್ಣಮೂರ್ತಿ, ಅಂಕುಶ ಗೋಖಲೆ ಇದ್ದರು

ಬೀದರ್: ಕಾರ್ಯಕರ್ತರು ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಣಿಯಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕ ರಾಮಜಿ ಗೌತಮ ಹೇಳಿದರು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ‘ಬಹುಜನರ ನಡಿಗೆ ಅಧಿಕಾರದ ಕಡೆಗೆ’ ಘೋಷವಾಕ್ಯದಡಿ ಇಲ್ಲಿಯ ಪ್ರತಾಪನಗರದಲ್ಲಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಕಿರೀಟ ಸ್ಥಾನದಲ್ಲಿರುವ ಬೀದರ್ ಬಹುಸಂಖ್ಯಾತರ ಜಿಲ್ಲೆಯಾಗಿದೆ. ಹೀಗಾಗಿ ಬೂತ್‍ಮಟ್ಟದಿಂದ ಪಕ್ಷದ ಸಂಘಟನೆ ಬಲಪಡಿಸಲು ಒತ್ತು ಕೊಡಬೇಕು ಎಂದು ಹೇಳಿದರು.

ADVERTISEMENT

ಪಕ್ಷದ ರಾಜ್ಯ ಉಸ್ತುವಾರಿ ಸುರೇಂದ್ರ ಸಿಂಗ್ ಕೋಲಾರಿಯಾ, ದಿನೇಶ ಗೌತಮ, ರಾಜ್ಯ ಘಟಕದ ಅಧ್ಯಕ್ಷ ಎಂ. ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಬಿ. ವಾಸು, ಕಾರ್ಯದರ್ಶಿ ದತ್ತು ಸೂರ್ಯವಂಶಿ, ಸೈಯದ್ ಹುಲ್ ಹಕ್ ಬುಖಾರಿ, ಅಂಕುಶ ಗೋಖಲೆ, ಜಿಲ್ಲಾ ಘಟಕದ ಅಧ್ಯಕ್ಷ ಜಮೀಲ್ ಅಹಮ್ಮದ್ ಖಾನ್, ಸಂಯೋಜಕ ಸ್ವಾಮಿದಾಸ ಕೆಂಪೆನೋರ, ಲಕ್ಷ್ಮಣ ಬಿ. ಉಪಸ್ಥಿತರಿದ್ದರು. ಸಂಗಮೇಶ ಹಡಪದ ನಿರೂಪಿಸಿದರು. ಫಿರ್ದೋಸ್‍ಖಾನ್ ಪಟೇಲ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.