ADVERTISEMENT

‘ನೆಲದ ನೆನಪು’ ಬಿಡುಗಡೆ ಇಂದು

ಗುರಮ್ಮ ಸಿದ್ದಾರೆಡ್ಡಿ ಪ್ರಧಾನ ಸಂಪಾದಕತ್ವದ ಕೃತಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 14:34 IST
Last Updated 28 ಅಕ್ಟೋಬರ್ 2021, 14:34 IST
ಗುರಮ್ಮ ಸಿದ್ದಾರೆಡ್ಡಿ
ಗುರಮ್ಮ ಸಿದ್ದಾರೆಡ್ಡಿ   

ಬೀದರ್: ಡಾ.ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಅವರ ಪ್ರಧಾನ ಸಂಪಾದಕತ್ವದ ಸಾಧಕರ ಮಾದರಿ ಜೀವನ ಗಾಥೆಯ ‘ನೆಲದ ನೆನಪು’ ಕೃತಿ ಬಿಡುಗಡೆ ಸಮಾರಂಭ ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶುಕ್ರವಾರ (ಅ.29) ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಡಾ. ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ ಕೃತಿ ಬಿಡುಗಡೆ ಮಾಡುವರು ಎಂದು ಗುರಮ್ಮ ಸಿದ್ದಾರೆಡ್ಡಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಸಚಿವ ಭೀಮಣ್ಣ ಖಂಡ್ರೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಗಂಗಾಂಬಿಕೆ ಪಾಟೀಲ, ಎನ್.ಬಿ. ರೆಡ್ಡಿ, ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಲಬೀರ್‍ಸಿಂಗ್, ಜಿಲ್ಲಾ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಡಾ. ಬಸವರಾಜ ಜಿ. ಪಾಟೀಲ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಭಾಗವಹಿಸುವರು ಎಂದು ತಿಳಿಸಿದರು.

ADVERTISEMENT

ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.

ಕೃತಿಯ ಪ್ರಧಾನ ಸಂಪಾದಕಿ ಗುರಮ್ಮ ಸಿದ್ದಾರೆಡ್ಡಿ, ಸಂಪಾದಕ ರಘುಶಂಖ ಭಾತಂಬ್ರಾ, ನೇತ್ರ ತಜ್ಞೆ ಡಾ. ರಾಜಶ್ರೀ ವಿ. ರೆಡ್ಡಿ ಉಪಸ್ಥಿತರಿರುವರು. ಡಾ. ವೀಣಾ ವಿ. ರೆಡ್ಡಿ ಸ್ವಾಗತಿಸುವರು ಎಂದು ತಿಳಿಸಿದರು.

ಕೃತಿಯು ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಒಂದಿಲ್ಲೊಂದು ರೀತಿಯ ಕೊಡುಗೆ ಕೊಟ್ಟಿರುವ 75 ಸಾಧಕರ ಯಶೋಗಾಥೆ ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲ ಸಾಧಕರನ್ನು ಒಳಗೊಂಡ ಕೃತಿ ಹೊರ ತರುವ ಉದ್ದೇಶ ಇದೆ ಎಂದು ಹೇಳಿದರು.

ಕೃತಿಯ ಸಹ ಸಂಪಾದಕ ಎಂ.ಜಿ.ದೇಶಪಾಂಡೆ, ಪುಣ್ಯವತಿ ವಿಸಾಜಿ, ಕೆ.ಎಸ್. ಚಳಕಾಪೂರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.