ADVERTISEMENT

ಬೀದರ್ ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಗೆ ಮನವಿ

ಭಗವಂತ ಖೂಬಾ, ದೀಪಕ್ ಬಾಗ್ಲಾ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 11:52 IST
Last Updated 19 ಫೆಬ್ರುವರಿ 2020, 11:52 IST
ಬೀದರ್ ಸಂಸದ ಭಗವಂತ ಖೂಬಾ ಅವರು ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಅಂಗಸಂಸ್ಥೆ ಇನ್ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಬಾಗ್ಲಾ ಅವರನ್ನು ಭೇಟಿ ಮಾಡಿದರು
ಬೀದರ್ ಸಂಸದ ಭಗವಂತ ಖೂಬಾ ಅವರು ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಅಂಗಸಂಸ್ಥೆ ಇನ್ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಬಾಗ್ಲಾ ಅವರನ್ನು ಭೇಟಿ ಮಾಡಿದರು   

ಬೀದರ್: ಬೀದರ್ ಜಿಲ್ಲೆಯಲ್ಲಿ ಕೃಷಿ ಸಂಸ್ಕರಣಾ ಘಟಕ, ಕೃಷಿ ಉಪಕರಣ ಘಟಕ, ಬಟ್ಟೆ ತಯಾರಿಕೆ ಕಾರ್ಖಾನೆ, ಆಹಾರ ಸಂಸ್ಕರಣಾ ಘಟಕ ಹಾಗೂ ಬಿಡಿ ಭಾಗಗಳ ಕೈಗಾರಿಕೆ ಸ್ಥಾಪಿಸುವಂತೆ ದೇಶ ವಿದೇಶಗಳ ಕಂಪನಿಗಳ ಮುಖ್ಯಸ್ಥರ ಮನವೊಲಿಸಬೇಕು ಎಂದು ಸಂಸದ ಭಗವಂತ ಖೂಬಾ ಕೇಂದ್ರ ಸರ್ಕಾರ ಅಧೀನ ಸಂಸ್ಥೆ ಇನ್ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಬಾಗ್ಲಾ ಅವರಿಗೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ಅವರನ್ನು ಭೇಟಿ ಮಾಡಿದ ಖೂಬಾ ಅವರು, ಕೈಗಾರಿಕೆ ಅಭಿವೃದ್ಧಿಗೆ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಬೀದರ್ ಕ್ಷೇತ್ರದ ನಿರುದ್ಯೋಗಿ ಯುವಕ, ಯುವತಿಯರಿಗೆ ವಿವಿಧ ತರಬೇತಿ ನೀಡಬೇಕೆಂದು ಕೋರಿದರು. ಸಂಸದರ ಮನವಿಗೆ ಸ್ಪಂದಿಸಿದ ಅವರು ಆದಷ್ಟು ಬೇಗ ಬೀದರ್‌ಗೆ ಭೇಟಿ ನೀಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.