ADVERTISEMENT

ಇನ್ನು ಆನ್‍ಲೈನ್‍ನಲ್ಲೇ ರಂಗಮಂದಿರ ಕಾಯ್ದಿರಿಸುವಿಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 11:14 IST
Last Updated 4 ಏಪ್ರಿಲ್ 2022, 11:14 IST

ಬೀದರ್: ಆನ್‍ಲೈನ್‍ನಲ್ಲೇ ರಂಗಮಂದಿರ ಕಾಯ್ದಿರಿಸುವಿಕೆ ಹಾಗೂ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಚಾಲನೆ ನೀಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.

ಪ್ರಾಥಮಿಕ ಹಂತದಲ್ಲಿ ರಂಗಮಂದಿರಗಳಾದ ರವೀಂದ್ರ ಕಲಾ ಕ್ಷೇತ್ರ, ನಯನ, ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾ ಕ್ಷೇತ್ರ ಆರ್ಟ್ ಗ್ಯಾಲರಿ, ಕಲಾ ಗ್ರಾಮ ಸಾಂಸ್ಕೃತಿಕ ಸಮುಚ್ಚಯ ಹಾಗೂ ಕಲಾಗ್ರಾಮ ಬಯಲು ರಂಗಮಂದಿರಗಳನ್ನು ಸಂಸ್ಕೃತಿ ಚಟುವಟಿಕೆಗಳಿಗಾಗಿ ಕಲಾವಿದರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರುwww.rangamandira.karnataka.gov.inಮೂಲಕ ಕಾಯ್ದಿರಿಸಬಹುದಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾ ವ್ಯಾಪ್ತಿಯ ಸಾಹಿತಿಗಳು/ಕಲಾವಿದರು ಸೇವಾ ಸಿಂಧು ಪೋರ್ಟಲ್ sevasindhu.karnataka.gov.inಮೂಲಕ ತಮ್ಮ ಮಾಹಿತಿ ನೋಂದಾಯಿಸಿಕೊಳ್ಳಬೇಕು ಎಂದು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.