ADVERTISEMENT

ಜನವಾಡ: ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:44 IST
Last Updated 12 ಸೆಪ್ಟೆಂಬರ್ 2025, 5:44 IST
ಬೀದರ್ ತಾಲ್ಲೂಕಿನ ಕಮಠಾಣದಿಂದ ಸಂಗೋಳಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬುಧವಾರ ಚಾಲನೆ ನೀಡಿದರು
ಬೀದರ್ ತಾಲ್ಲೂಕಿನ ಕಮಠಾಣದಿಂದ ಸಂಗೋಳಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬುಧವಾರ ಚಾಲನೆ ನೀಡಿದರು   

ಕಮಠಾಣ(ಜನವಾಡ): ಬೀದರ್ ತಾಲ್ಲೂಕಿನ ಕಮಠಾಣದಿಂದ ಮಂದಕನಳ್ಳಿ, ಶಮಶೀರನಗರ, ಕಂಗನಕೋಟ್, ಬಾವಗಿ, ಸಿರ್ಸಿ(ಎ), ನೆಲವಾಡ ಮಾರ್ಗವಾಗಿ ಸಂಗೋಳಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣಕ್ಕೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಕಮಠಾಣದಲ್ಲಿ ಬುಧವಾರ ಚಾಲನೆ ನೀಡಿದರು.

ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿನ ತಗ್ಗುಗಳನ್ನು ಮುಚ್ಚುವ ಕೆಲಸ ಹಲವು ವರ್ಷಗಳಿಂದ ಆಗುತ್ತಿತ್ತು. ಇದೀಗ ಸಾರ್ವಜನಿಕರ ಬೇಡಿಕೆಯಂತೆ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಕಾಮಗಾರಿಯ ವೆಚ್ಚ ₹ 6 ಕೋಟಿ ಆಗಿದೆ ಎಂದು ಅವರು ತಿಳಿಸಿದರು.

ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದೊಂದಿಗೆ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನಮ್ಮ ಶಿವರಾಜ, ಮುಖಂಡರಾದ ಕುಶಾಲರಾವ್ ಯಾಬಾ, ನಾಗಭೂಷಣ ಕಮಠಾಣ, ಗುರುನಾಥ ರಾಜಗೀರಾ, ಸುರೇಶ ಮಾಶಟ್ಟಿ, ಶಿವಕುಮಾರ ಸ್ವಾಮಿ, ಚಂದ್ರಯ್ಯ ಸ್ವಾಮಿ, ಉದಯಕುಮಾರ ತೋರಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.