ಭಾಲ್ಕಿ: ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ, ವಿಜಯದಶಮಿ ಉತ್ಸವ ನಿಮಿತ್ತ ಸ್ವಯಂ ಸೇವಕರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ಸುಮಾರು 201 ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು.
ಪಥಸಂಚಲನದ ಮಾರ್ಗದುದ್ದಕ್ಕೂ ಸ್ವಯಂ ಸೇವಕರ ಮೇಲೆ ತಾಯಿಂದಿರು, ಹಿರಿಯರು ಪುಷ್ಪವೃಷ್ಟಿ ಮಾಡುತ್ತ ಭಾರತ ಮಾತಾ ಕೀ ಜೈ ಘೋಷಣೆ ಹಾಕುತ್ತಿದ್ದ ದೃಶ್ಯ ಗಮನ ಸೆಳೆಯಿತು.
ಸಂಘದ ಕಲಬುರಗಿ ವಿಭಾಗದ ಪ್ರಚಾರ ಪ್ರಮುಖ ಪ್ರವೀಣ ಕುಲಕರ್ಣಿ ಮಾತನಾಡಿ, ‘ಸಂಘದ ಶಕ್ತಿ–ಸಮಾಜದ ಶಕ್ತಿಯಾಗಿದೆ. ನೂರು ವರ್ಷಗಳಿಂದ ದೇಶ ಸೇವೆಯನ್ನು ತನ್ನ ಗುರಿಯಾಗಿಸಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರ್ಯ ಮಾಡುತ್ತಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ವಿವಿಧ ಆಯಾಮಗಳಲ್ಲಿ ತೊಡಗಿ ದೇಶ ಸೇವೆ ಸಲ್ಲಿಸುತ್ತಿದೆ. ಕುಟುಂಬ ಪ್ರಬುದ್ಧ, ಪರಿಸರ ಸಂರಕ್ಷಣೆ, ನಾಗರಿಕರ ಶಿಷ್ಟಾಚಾರ ಪಾಲನೆ, ಸ್ವದೇಶಿ, ನೀರು ಸಂರಕ್ಷಣೆಗೆ ಸಮಾಜಕ್ಕೆ ಕರೆ ಕೊಡಲಾಗಿದೆ’ ಎಂದು ತಿಳಿಸಿದರು.
ಪ್ರಮುಖರಾದ ಪುನೀತ್ ಪರ್ವತಮಠ, ಚಿದಾನಂದ ಜಿ., ಸತೀಶ ಮುದ್ದಾಳೆ, ದಯಾನಂದ ಪವಾರ, ಕಾಶಿನಾಥ, ಪ್ರದೀಪ ಉಂಬರಗೆ, ಸಿದ್ದು, ಗುರು, ರೇವಣಸಿದ್ದ ಜಾಡರ್, ಶರಣು ಬನ್ನಾಳೆ, ಮಹೇಶ ನಿಂಬೂರೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.