ಬೀದರ್: ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ 166ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಸಂಗ್ರಾಮ ಇಂಗಳೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,' ಬಸವಾದಿ ಶರಣರು ಹಾಕಿಕೊಟ್ಟು ಮಾರ್ಗದಲ್ಲಿ ಸಾಗಿದರೆ ಪ್ರತಿಯೊಬ್ಬರು ನೆಮ್ಮದಿಯ ಜೀವನ ಸಾಗಿಸಬಹುದು ' ಎಂದು ಹೇಳಿದರು.
’ಶರಣರ ವಚನಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತವೆ. ಆದ್ದರಿಂದ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ' ಎಂದು ತಿಳಿಸಿದರು.
ಶಿವಯೋಗ ಕುಟೀರದ ಪಂಚಯ್ಯ ಸ್ವಾಮೀಜಿ ಮಾತನಾಡಿ,' ಪ್ರಮಾಣಿಕತೆಯಿಂದ ಸತ್ಯಶುದ್ಧ ಕಾಯಕ ಮಾಡಿ ಅಂತರಂಗ ಬಹಿರಂಗದಿಂದ ಶುದ್ಧವಾಗಿರಬೇಕು. ಮಕ್ಕಳಿಗೆ ಉತ್ತಮ ಸಂಸ್ಕೃತಿ ನೀಡಬೇಕು ' ಎಂದು ಸಲಹೆ ನೀಡಿದರು.
ಪ್ರವಚನಕಾರ್ತಿ ಭಾರತಿ ಆರ್. ಪಾಟೀಲ ಮಾತನಾಡಿದರು. ಪ್ರಸಾದ ನಿಲಯದ ಸಂಚಾಲಕ ಪ್ರೊ.ಉಮಾಕಾಂತ ಮೀಸೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಶ್ರೀಕಾಂತ ಬಿರಾದಾರ ಇದ್ದರು. ಕಲಾವಿದರಾದ ಚನ್ನಬಸಪ್ಪ ನೌಬಾದೆ, ನಾಗನಾಥ ಪಾಂಚಾಳ, ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.