ADVERTISEMENT

ಕೋವಿಡ್ ಭೀತಿ; ಸ್ಯಾನಿಟೈಸರ್ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:15 IST
Last Updated 1 ಮೇ 2021, 7:15 IST
ಕಮಲನಗರ ತಾಲ್ಲೂಕಿನ ಠಾಣಾಕುಶನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ನಿಡೋದಾ, ಠಾಣಾಕುಶನೂರು ಗ್ರಾಮದಲ್ಲಿ ಗುರುವಾರ ರಸ್ತೆಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು
ಕಮಲನಗರ ತಾಲ್ಲೂಕಿನ ಠಾಣಾಕುಶನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ನಿಡೋದಾ, ಠಾಣಾಕುಶನೂರು ಗ್ರಾಮದಲ್ಲಿ ಗುರುವಾರ ರಸ್ತೆಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು   

ಕಮಲನಗರ: ತಾಲ್ಲೂಕಿನ ಠಾಣಾಕುಶನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಿಡೋದಾ, ಠಾಣಾಕುಶನೂರು, ದತ್ತನಗರ ವಿವಿಧ ಗ್ರಾಮಗಳಲ್ಲಿ ಪಿಡಿಒ ಮನೋಹರ ಅವರ ನೇತೃತ್ವದಲ್ಲಿ ಗುರುವಾರ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು.

‘ಸಾರ್ವಜನಿಕರಲ್ಲಿ ಕೋವಿಡ್ ಸೋಂಕಿನ ಬೀತಿ ಎದುರಾಗಿದೆ. ಈ ಬಾರಿ ಸಾವಿನ ಪ್ರಕರಣ ಜಾಸ್ತಿಯಾಗುತ್ತಿರುವ ಕಾರಣ ಗ್ರಾಮೀಣ ಭಾಗದ ಪ್ರತಿಯೊಂದು ಗ್ರಾಮ ಬಡಾವಣೆಗಳಲ್ಲಿ ಆತಂಕದಲ್ಲಿದ್ದಾರೆ. ಕೆಲ ಗ್ರಾಮಸ್ಥರು ಸ್ವಯಂ ಆಗಿ ಲಾಕ್‍ಡೌನ್ ಮಾಡಿಕೊಂಡಿದ್ದಾರೆ. ಹೀಗಾಗಿ, ವಲಸೆ ಕಾರ್ಮಿಕರು ಈಗಾಗಲೇ ರಸ್ತೆಯಲ್ಲಿ ಓಡಾಡಿದ ಪ್ರಯುಕ್ತ ಸ್ಯಾನಿಟೈಸರ್ ಸಿಂಪರಣೆ ಮಾಡುವ ಮೂಲಕ ಜನರಲ್ಲಿ ಕೋವಿಡ್ ಭೀತಿ ದೂರಮಾಡ ಬಹುದಾಗಿದೆ’ ಎಂದು ತಿಳಿಸಿದರು.

‘ಪಕ್ಕದ ಮಹಾರಾಷ್ಟ್ರದಲ್ಲಿ ಏಪ್ರಿಲ್ 30ರ ವರೆಗೆ ಇದ್ದ ಲಾಕ್‌ಡೌನ್ 15 ದಿನ ವಿಸ್ತರಣೆ ಮಾಡಲಾಗಿದೆ. ನೆರೆ ರಾಜ್ಯದಿಂದ ಬರುವವರು ಕೋವಿಡ್ ಪರೀಕ್ಷೆ ಮಾಡಿಕೊಳ್ಳಿ. 45 ವರ್ಷಕ್ಕಿಂತ ಮೇಲ್ಪಟ್ಟವರು ಕಡಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ’ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯರಾದ ಕಾಶಿನಾಥ ಜಿರ್ಗೆ, ವೀರೇಂದ್ರ ರಾಜಾಪುರೆ, ಸಿಬ್ಬಂದಿ ಮಾರುತಿ ಕೋಳಿ, ಪ್ರಶಾಂತ ಜಿರ್ಗೆ, ರಮೇಶ ಕಿರಣ, ಸುಂದರರಾಜ ಮಾಲೂರೆ, ಸೈಯದ್ ಬಾಬು ಮಿಯ್ಯಾ, ಚಾಂದ್ ಸಾಬ್ ಇದ್ದರು.

ಗ್ರಾಮದ ದತ್ತನಗರ, ಮಾಣೀಕರಾವ್‌ ಪಾಟೀಲ, ಶಾಂತಿನಗರ, ಟೀಚರ್ ಕಾಲೊನಿ, ಡಿಸಿಸಿ ಬ್ಯಾಂಕ್, ಕೆನರಾ ಬ್ಯಾಂಕ್, ಪೊಲೀಸ್ ಠಾಣೆ ಮತ್ತು ನಿಡೋದಾ ಸೇರಿದಂತೆ ಪ್ರಮುಖ ವಾರ್ಡ್‍ಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.