ADVERTISEMENT

ದೇಹವೆಂಬ ದೇವಾಲಯದಲ್ಲಿ ದೇವರ ಕಾಣಿರಿ: ಗೋವಾದ ಪ್ರಭು ಬೋದಾನಂದಜಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:57 IST
Last Updated 9 ಜನವರಿ 2020, 14:57 IST
ಬೀದರ್‌ನ ಮಾನವ ಉತ್ಥಾನ ಸೇವಾ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮವನ್ನು ಗೋವಾದ ಮಾನವ ಉತ್ಥಾನ ಸೇವಾ ಸಮಿತಿಯ ಪ್ರಭುಬೋದಾನಂದಜಿ ಉದ್ಘಾಟಿಸಿದರು
ಬೀದರ್‌ನ ಮಾನವ ಉತ್ಥಾನ ಸೇವಾ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮವನ್ನು ಗೋವಾದ ಮಾನವ ಉತ್ಥಾನ ಸೇವಾ ಸಮಿತಿಯ ಪ್ರಭುಬೋದಾನಂದಜಿ ಉದ್ಘಾಟಿಸಿದರು   

ಬೀದರ್‌: ‘ಪರಮಾತ್ಮನನ್ನು ಎಲ್ಲೆಡೆ ಹುಡುಕುತ್ತ ಹೋಗದೆ ದೇಹವೆಂಬ ದೇಗುಲದಲ್ಲಿಯೇ ಪರಮಾತ್ಮನ ದರ್ಶನ ಪಡೆದುಕೊಳ್ಳಬೇಕು’ ಎಂದು ಗೋವಾದ ಮಾನವ ಉತ್ಥಾನ ಸೇವಾ ಸಮಿತಿಯ ಪ್ರಭು ಬೋದಾನಂದಜಿ ಹೇಳಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಮಾನವ ಉತ್ಥಾನ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸತ್ಸಂಗದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಗುರುವಿನ ಅನುಗ್ರಹದಿಂದ ತಮ್ಮೊಳಗಿರುವ ದೇವರನ್ನು ಕಾಣಬೇಕು’ ಎಂದು ನುಡಿದರು.

ADVERTISEMENT

ವಿಶ್ವಾಸನಂದಜಿ ಮಾತನಾಡಿ, ‘ಇಲ್ಲಿಯ ಕೆನರಾ ಬ್ಯಾಂಕ್ ಹಿಂಭಾಗದ ಅಂಬಣ್ಣ ಗುರ್ಲಾ ಅವರ ಮನೆಯಲ್ಲಿ ಪ್ರತಿ ಭಾನುವಾರ ಸಂಜೆ 4 ರಿಂದ 6 ವರೆಗೆ ಸತ್ಸಂಗ ಕಾರ್ಯಕಮ ನಡೆಯಲಿದೆ’ ಎಂದರು.

ಮಾನವ ಉತ್ಥಾನ ಸೇವಾ ಸಮಿತಿಯ ಎನ್.ಆರ್.ವರ್ಮಾ, ರಾಮಕೃಷ್ಣ ಸಾಳೆ, ಈಶ್ವರಸಿಂಗ್ ಠಾಕೂರ, ಹಣಮಂತ ಬುಳ್ಳಾ, ಬಾಬು ವಾಲಿ ಹಾಗೂ ದರ್ಬಾರ್‌ ಸಿಂಗ್ ಇದ್ದರು.

ಶಂಕರರಾವ್‌ ಸ್ವಾಗತಿಸಿದರು. ಸುನೀಲ ಗೌಳಿ ನಿರೂಪಿಸಿದರು. ಮಾಣಿಕಪ್ಪ ಚಿಟ್ಟಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.